ADVERTISEMENT

ಸುಶಾಂತ್ ಪ್ರಕರಣ:‌ ರಿಯಾ ಚಕ್ರವರ್ತಿ ವಿಚಾರಣೆ ನಡೆಸಿದ ಸಿಬಿಐ

ಪಿಟಿಐ
Published 28 ಆಗಸ್ಟ್ 2020, 11:29 IST
Last Updated 28 ಆಗಸ್ಟ್ 2020, 11:29 IST
ರಿಯಾ ಚಕ್ರವರ್ತಿ
ರಿಯಾ ಚಕ್ರವರ್ತಿ   

ಮುಂಬೈ: ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇದೇ ಮೊದಲ ಬಾರಿಗೆ ನಟಿ ರಿಯಾ ಚಕ್ರವರ್ತಿ ಅವರವಿಚಾರಣೆಯನ್ನು ಶುಕ್ರವಾರ ನಡೆಸಿದೆ.

ಪ್ರಕರಣದ ವಿಚಾರಣೆ ನಡೆಸಲು ಡಿಆರ್‌ಡಿಒ ಅತಿಥಿ ಗೃಹಕ್ಕೆಬೆಳಿಗ್ಗೆ 10.30ರ ಒಳಗೆ ಹಾಜರಾಗುವಂತೆ ರಿಯಾ ಚಕ್ರವರ್ತಿಗೆ ಸಮನ್ಸ್‌ ನೀಡಲಾಗಿತ್ತು.ಇದೇ ಸಂದರ್ಭದಲ್ಲಿ, ಸುಶಾಂತ್‌ ಸ್ನೇಹಿತ ಸಿದ್ಧಾರ್ಥ್‌ ಪಿಠಾಣಿ, ಅಡುಗೆ ಕೆಲಸಕ್ಕಿದ್ದ ನೀರಜ್‌ ಸಿಂಗ್‌ ಅವರ ವಿಚಾರಣೆಯನ್ನು ನಡೆಸಲಾಗಿದೆ.

ಪ್ರಕರಣದ ತನಿಖೆಗಾಗಿ ನಗರಕ್ಕೆ ಬಂದಿರುವ ಸಿಬಿಐ ತಂಡ ಸಾಂತಾಕ್ರೂಸ್‌ನಲ್ಲಿ ಇರುವ ಡಿಆರ್‌ಡಿಒ ಅತಿಥಿ ಗೃಹದಲ್ಲಿ ಎಂಟು ದಿನಗಳಿಂದ ಉಳಿದುಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.