ADVERTISEMENT

ಸುಶಾಂತ್ ಸಿಂಗ್ ಪ್ರಕರಣ: ಸಿಬಿಐ ತಂಡದಿಂದ ಪ್ರಮುಖ ಸಾಕ್ಷಿಗಳ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 5:47 IST
Last Updated 23 ಆಗಸ್ಟ್ 2020, 5:47 IST
ಸುಶಾಂತ್ ಸಿಂಗ್
ಸುಶಾಂತ್ ಸಿಂಗ್    

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಸಾವಿಗೀಡಾಗಿ ಇಂದಿಗೆ 70 ದಿನಗಳಾಗಿದ್ದು, ಸುಶಾಂತ್ ಕುಟುಂಬ ನ್ಯಾಯಕ್ಕಾಗಿ ಕಾದುಕುಳಿತಿದೆ. ಜೂನ್ 25ರಂದು ಸುಶಾಂತ್ ಅಪ್ಪ ಕೆ.ಕೆ ಸಿಂಗ್ ಅವರು ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಲಾತ್ತು. ಇದೀಗ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡ ಭಾನುವಾರ ಪ್ರಮುಖ ಸಾಕ್ಷಿಗಳನ್ನುವಿಚಾರಣೆಗೊಳಪಡಿಸಿದೆ.

ಸುಶಾಂತ್ ಸಿಂಗ್ ಸ್ನೇಹಿತ ಸಿದ್ದಾರ್ಥ್ಪಿಥಾನಿ ಭಾನುವಾರ ಬೆಳಗ್ಗೆಡಿಆರ್‌ಡಿಒ ಅತಿಥಿ ಗೃಹಕ್ಕೆ ತಲುಪಿದ್ದಾರೆ. ಇಲ್ಲಿ ಸಿಬಿಐ ತಂಡ ಸುಶಾಂತ್ ಸಾವು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ.

ADVERTISEMENT

ಸುಶಾಂತ್ ಸಿಂಗ್ ರಜಪೂತ್ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ನೀರಜ್‌ನ್ನು ಕೂಡಾ ಸಿಬಿಐ ತನಿಖೆಗೆ ಒಳಪಡಿಸಿದೆ.

ಟ್ವಿಟರ್‌ನಲ್ಲಿ Sorry babu ಟ್ರೆಂಡಿಂಗ್

ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ರಿಯಾ ಪ್ರಮುಖ ಆರೋಪಿಯಾಗಿದ್ದಾರೆ. ಸುಶಾಂತ್ ಸಾವಿನ ನಂತರ ಆರೋಪ, ಪ್ರತ್ಯಾರೋಪ, ಸಾಕ್ಷ್ಯಗಳ ಬಗ್ಗೆ ಸಾಮಾಜಿಕ ತಾಣದಲ್ಲಿ ಸದಾ ಚರ್ಚೆ ನಡೆಯುತ್ತಲೇ ಇರುತ್ತದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ Sorry babu ಟ್ರೆಂಡ್ ಆಗಿದೆ.

ಸುಶಾಂತ್ ಸಿಂಗ್ ಸಾವಿನ ಸುದ್ದಿ ತಿಳಿದ ರಿಯಾ ಕೂಪರ್ ಆಸ್ಪತ್ರೆಗೆ ಬಂದ ಮೃತದೇಹವನ್ನು ನೋಡಿದ್ದಾಳೆ.ಶೈತ್ಯಾಗಾರದಲ್ಲಿರಿಸಿದ ಮೃತದೇಹದ ಎದೆ ಮೇಲೆ ಕೈಯಿಟ್ಟ ರಿಯಾ 'Sorry babu' ಎಂದಿದ್ದಾಳೆ ಎಂದು ಪ್ರತ್ಯಕ್ಷದರ್ಶಿ ಸುರ್ಜೀತ್ ಸಿಂಗ್ ರಾಠೋಡ್ ಹೇಳಿದ್ದಾರೆ. ಸುಶಾಂತ್ ಮೃತದೇಹವನ್ನು ನೋಡಬೇಕು ಎಂದು ರಿಯಾಳ ಅಮ್ಮ ಮತ್ತು ಸಹೋದರ ಶೌಮಿಕ್ ಕೇಳಿಕೊಂಡರೂ ಮುಂಬೈ ಪೊಲೀಸರು ಬಿಡಲಿಲ್ಲ ಎಂದು ಸುರ್ಜೀತ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸುಶಾಂತ್ ಸಿಂಗ್ ಕುಟುಂಬದ ವಕೀಲ ವಿಕಾಸ್ ಸಿಂಗ್, ರಿಯಾಗೆ ಸುಶಾಂತ್ ಸಿಂಗ್ ಜತೆ ಯಾವುದೇ ಸಂಬಂಧ ಇಲ್ಲದೇ ಇರುವಾಗ ಆಕೆ ಶೈತ್ಯಾಗಾರಕ್ಕೆ ಹೋಗಿದ್ದು ಸಂಶಯವನ್ನುಂಟು ಮಾಡಿದೆ. ಮರಣೋತ್ತರ ಪರೀಕ್ಷೆಗೆ ಮುನ್ನ ಸುಶಾಂತ್ ಮೃತದೇಹವನ್ನು ನೋಡಲು ಆಕೆಗೆ ಅನುಮತಿ ನೀಡಿದ್ದರ ಬಗ್ಗೆ ಮುಂಬೈಪೊಲೀಸರು ಉತ್ತರಿಸಬೇಕು. ಸಾಕ್ಷ್ಯಗಳನ್ನು ಹಾಳುಮಾಡುವ ಸಾಧ್ಯತೆಯೂ ಇಲ್ಲಿರುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.