ADVERTISEMENT

ವಿದಿಶಾದಲ್ಲಿ ಸುಷ್ಮಾ ಸ್ವರಾಜ್‌ ಪ್ರತಿಮೆ ನಿರ್ಮಾಣ: ಶಿವರಾಜ್‌ ಸಿಂಗ್‌ ಚೌಹಾಣ್‌

ಪಿಟಿಐ
Published 14 ಫೆಬ್ರುವರಿ 2021, 10:12 IST
Last Updated 14 ಫೆಬ್ರುವರಿ 2021, 10:12 IST
ಸುಷ್ಮಾ ಸ್ವರಾಜ್‌ ಅವರ ಭಾವಚಿತ್ರಕ್ಕೆ ವಂದಿಸುತ್ತಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌
ಸುಷ್ಮಾ ಸ್ವರಾಜ್‌ ಅವರ ಭಾವಚಿತ್ರಕ್ಕೆ ವಂದಿಸುತ್ತಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌   

ಭೋಪಾಲ್‌: ‘ಮಧ್ಯಪ್ರದೇಶದ ವಿದಿಶಾದಲ್ಲಿ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಅವರ ಪ್ರತಿಮೆಯನ್ನು ನಿರ್ಮಿಸಲಾಗುವುದು’ ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ತಿಳಿಸಿದರು.

ಭಾನುವಾರ ಸುಷ್ಮಾ ಸ್ವರಾಜ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಅವರ ನಿವಾಸಕ್ಕೆ ಭೇಟಿ ನೀಡಿ,ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

‘ತನ್ನ ಲೋಕಸಭಾ ಕ್ಷೇತ್ರ ವಿದಿಶಾದ ಅಭಿವೃದ್ಧಿಗಾಗಿ ಸುಷ್ಮಾ ಅವರು ನೀಡಿದ ಕೊಡುಗೆಯನ್ನು ಹೋಲಿಸಲು ಸಾಧ್ಯವಿಲ್ಲ. ವಿದಿಶಾದ ಟೌನ್‌ ಹಾಲ್‌ನಲ್ಲಿ ಸುಷ್ಮಾ ಸ್ವರಾಜ್ ಅವರ ಪ್ರತಿಮೆಯನ್ನು ನಿರ್ಮಿಸಲಾಗುವುದು’ ಎಂದು ಅವರು ಹೇಳಿದರು.

ADVERTISEMENT

2009 ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ವಿದಿಶಾ ಕ್ಷೇತ್ರದಲ್ಲಿ ಸುಷ್ಮಾ ಸ್ವರಾಜ್ ಅವರು ಗೆಲುವು ಸಾಧಿಸಿದ್ದರು. ಸುಷ್ಮಾ ಸ್ವರಾಜ್‌ ಅವರು 2019ರ ಆಗಸ್ಟ್‌ 6ರಂದು ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.