ADVERTISEMENT

ವಾಯುಮಾಲಿನ್ಯ: ನೋಯ್ಡಾದಲ್ಲಿ ಆನ್‌ಲೈನ್‌ ತರಗತಿಗೆ ಆದೇಶ

ಹದಗೆಡುತ್ತಿರುವ ಗಾಳಿ ಗುಣಮಟ್ಟ

ಪಿಟಿಐ
Published 3 ನವೆಂಬರ್ 2022, 22:16 IST
Last Updated 3 ನವೆಂಬರ್ 2022, 22:16 IST
ದೆಹಲಿಯ ಅಕ್ಷರಧಾಮ ದೇವಾಲಯದ ಸುತ್ತಲೂ ಗುರುವಾರ ದಟ್ಟ ಹೊಗೆ ಆವರಿಸಿತ್ತು–ಪಿಟಿಐ ಚಿತ್ರ 
ದೆಹಲಿಯ ಅಕ್ಷರಧಾಮ ದೇವಾಲಯದ ಸುತ್ತಲೂ ಗುರುವಾರ ದಟ್ಟ ಹೊಗೆ ಆವರಿಸಿತ್ತು–ಪಿಟಿಐ ಚಿತ್ರ    

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ದಿನೇ ದಿನೇ ಹದಗೆಡುತ್ತಿರು ವುದರಿಂದ ಮಕ್ಕಳ ಹೊರಾಂಗಣ ಚಟುವಟಿಕೆಗಳನ್ನು ನಿರ್ಬಂಧಿಸಲುಶಾಲಾ ಆಡಳಿತ ಮಂಡಳಿಗಳು ತೀರ್ಮಾನಿಸಿವೆ.

ನೋಯ್ಡಾ ಮತ್ತು ಗ್ರೇಟರ್‌ ನೋಯ್ಡಾದಲ್ಲಿನ ಎಲ್ಲ ಶಾಲೆಗಳು ನ.8ರ ತನಕ 8ನೇ ತರಗತಿ ವರೆಗೆ ಆನ್‌ಲೈನ್‌ ಮೂಲಕ ಬೋಧನೆ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

9ರಿಂದ 12ನೇ ತರಗತಿ ವರೆಗಿನ ಬೋಧನೆಯನ್ನು ಸಾಧ್ಯವಾದಷ್ಟು ಆನ್‌ಲೈನ್‌ ಮೂಲಕವೇ ನಡೆಸುವಂತೆಯೂ ಸೂಚಿಸಲಾಗಿದೆ.

ADVERTISEMENT

‘ದೆಹಲಿ ನಗರ ವ್ಯಾಪ್ತಿಯ ಗಾಳಿಯ ಗುಣಮಟ್ಟ ಗುರುವಾರ ಮತ್ತಷ್ಟು ಬಿಗಡಾಯಿಸಿದೆ’ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ನಿಷೇಧ: ಮಾಲಿನ್ಯ ನಿಯಂತ್ರಣಕ್ಕೆ ಹಲವು ಕ್ರಮ ಕೈಗೊಂಡಿರುವ ಕಮಿಷನ್‌ ಫಾರ್‌ ಏರ್‌ ಕ್ವಾಲಿಟಿ ಮ್ಯಾನೇಜ್‌ಮೆಂಟ್‌ (ಸಿಎಕ್ಯೂಎಂ) ನಗರದೊಳಗೆ ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಡೀಸೆಲ್‌ ಚಾಲಿತ ಲಘು ವಾಹನಗಳ ಸಂಚಾರವನ್ನೂ ನಿಷೇಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.