
ಪಿಟಿಐ
ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ವಿಶೇಷ ಸ್ವಚ್ಛತಾ ಅಭಿಯಾನದಲ್ಲಿ ಗುಜರಿ ಮತ್ತು ಇ–ತ್ಯಾಜ್ಯ ವಿಲೇವಾರಿಯಿಂದ ಕೇಂದ್ರ ಸರ್ಕಾರಕ್ಕೆ ₹550 ಕೋಟಿ ವರಮಾನ ಬಂದಿದೆ.
ಸರ್ಕಾರಿ ಕಚೇರಿಗಳಲ್ಲಿನ ಗುಜರಿ ವಸ್ತುಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ‘ಸ್ವಚ್ಛತಾ ಅಭಿಯಾನ 5.0’ ಹಮ್ಮಿಕೊಳ್ಳಲಾಗಿತ್ತು. ಗಾಂಧಿ ಜಯಂತಿಯಂದು ಆರಂಭಗೊಂಡ ಈ ಅಭಿಯಾನವು ಅ.31ರವರೆಗೆ ನಡೆದಿತ್ತು.
ಈ ಅಭಿಯಾನದಡಿ 7 ಲಕ್ಷದಷ್ಟು ಸ್ವಚ್ಛತಾ ಶಿಬಿರಗಳು ನಡೆದಿದ್ದು, ಶೇ 97ರಷ್ಟು ಗುರಿ ತಲುಪಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಗುಜರಿ ಮುಕ್ತಗೊಳಿಸಿದ ನಂತರ ಸುಮಾರು 202.97 ಲಕ್ಷ ಚದರ ಅಡಿಯಷ್ಟು ಸ್ಥಳ ಬಳಕೆಗೆ ಮುಕ್ತವಾಗಿದೆ ಎಂದು ಸಿಬ್ಬಂದಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.