ADVERTISEMENT

ಸ್ವಾತಿ ಹಲ್ಲೆ ಪ್ರಕರಣ|ಶ್ರೀಲಂಕಾಕ್ಕೆ ಹೋಗಲು ಕೇಜ್ರಿವಾಲ್ ಆಪ್ತ ಬಿಭವ್‌ಗೆ ಅನುಮತಿ

ಪಿಟಿಐ
Published 13 ಜುಲೈ 2025, 3:10 IST
Last Updated 13 ಜುಲೈ 2025, 3:10 IST
<div class="paragraphs"><p>ಬಿಭವ್ ಕುಮಾರ್ ಮತ್ತು&nbsp;ಸ್ವಾತಿ ಮಾಲಿವಾಲ್</p></div>

ಬಿಭವ್ ಕುಮಾರ್ ಮತ್ತು ಸ್ವಾತಿ ಮಾಲಿವಾಲ್

   

ನವದೆಹಲಿ: ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್‌ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಅವರಿಗೆ ಶ್ರೀಲಂಕಾಕ್ಕೆ ತೆರಳಲು ದೆಹಲಿ ನ್ಯಾಯಾಲಯ ಅನುಮತಿ ನೀಡಿದೆ.

ಆಗಸ್ಟ್ 13ರಿಂದ 22ರವರೆಗೆ ಶ್ರೀಲಂಕಾಕ್ಕೆ ಪ್ರಯಾಣಿಸಲು ಅನುಮತಿ ಕೋರಿ ಬಿಭವ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಭೂಪಿಂದರ್ ಸಿಂಗ್, ‘ಆರೋಪಿಯು ತನ್ನ ಕುಟುಂಬವನ್ನು ರಜೆ ನಿಮಿತ್ತ ಪ್ರವಾಸಕ್ಕೆ ಕರೆದೊಯ್ಯುವ ಹಕ್ಕನ್ನು ಮಾತ್ರವಲ್ಲದೆ, ಕರ್ತವ್ಯವನ್ನೂ ಹೊಂದಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

ಆಪ್ತ ಬಿಭವ್‌ ಕುಮಾರ್‌ ಅವರಿಗೆ ಸುಪ್ರೀಂ ಕೋರ್ಟ್‌ 2024ರ ಸೆಪ್ಟೆಂಬರ್‌ನಲ್ಲಿ ಜಾಮೀನು ಮಂಜೂರು ಮಾಡಿತ್ತು.

‘ಬಿಭವ್‌ ಅವರು ಕೇಜ್ರಿವಾಲ್ ಅವರ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸಬಾರದು ಮತ್ತು ಮುಖ್ಯಮಂತ್ರಿ ಕಚೇರಿಯು ಅವರಿಗೆ ಯಾವುದೇ ಅಧಿಕೃತ ಜವಾಬ್ದಾರಿ ನೀಡಬಾರದು’ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಉಜ್ಜಲ್‌ ಭುಯನ್‌ ಅವರಿದ್ದ ಪೀಠ ಆದೇಶಿಸಿತ್ತು,

‘ಎಲ್ಲ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಬಿಭವ್‌ ಅವರು ಮುಖ್ಯಮಂತ್ರಿಗಳ ನಿವಾಸಕ್ಕೂ ತೆರಳಬಾರದು’ ಎಂದು ನ್ಯಾಯಾಲಯ ನಿರ್ದೇಶನ ನೀಡಿತ್ತು. ‘ಇದು ಸಣ್ಣ ಪುಟ್ಟ ಗಾಯಗಳ ಪ್ರಕರಣವಾಗಿದ್ದು, ಈ ವಿಷಯದಲ್ಲಿ ಜಾಮೀನು ವಿರೋಧಿಸಬಾರದು' ಎಂದು ದೆಹಲಿ ಪೊಲೀಸರ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರಿಗೆ ನ್ಯಾಯಪೀಠ ಹೇಳಿತ್ತು.

ಕೇಜ್ರಿವಾಲ್‌ ಅವರ ಅಧಿಕೃತ ನಿವಾಸದಲ್ಲಿ 2024ರ ಮೇ 13ರಂದು ಎಎಪಿಯ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಅವರ ಮೇಲೆ ಬಿಭವ್‌ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.