ADVERTISEMENT

ವೀಸಾ ನಿಯಮ ಉಲ್ಲಂಘನೆ: ತಬ್ಲೀಗಿ ಜಮಾತ್‌ಗೆ ಹೋಗಿದ್ದ 17 ಮಂದಿಗೆ ಜೈಲು

ಏಜೆನ್ಸೀಸ್
Published 13 ಏಪ್ರಿಲ್ 2020, 5:09 IST
Last Updated 13 ಏಪ್ರಿಲ್ 2020, 5:09 IST
ದೆಹಲಿಯ ನಿಜಾಮುದ್ದೀನ್‌ನಲ್ಲಿರುವ ಮರ್ಕಜ್ ಮಸೀದಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿದರು. (ಸಂಗ್ರಹ ಚಿತ್ರ)
ದೆಹಲಿಯ ನಿಜಾಮುದ್ದೀನ್‌ನಲ್ಲಿರುವ ಮರ್ಕಜ್ ಮಸೀದಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿದರು. (ಸಂಗ್ರಹ ಚಿತ್ರ)   

ಲಖನೌ: ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದಿದ್ದ ತಬ್ಲೀಗಿ ಜಮಾತ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇಂಡೋನೇಷಿಯಾ ಮತ್ತು ಥಾಯ್ಲೆಂಡ್‌ನ17 ಮಂದಿಯ ಕ್ವಾರಂಟೈನ್ ಅವಧಿ ಮುಗಿದನಂತರ ಉತ್ತರ ಪ್ರದೇಶ ಸರ್ಕಾರವು ಜೈಲಿಗೆ ಕಳಿಸಿದೆ.

ಕ್ವಾರಂಟೈನ್ ಅವಧಿ ಮುಗಿದ ನಂತರ 17 ಮಂದಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಯಿತು. ಈ ಸಂದರ್ಭ ಅವರೆಲ್ಲರೂ ವಿಸಾ ಮತ್ತು ಪಾಸ್‌ಪೋರ್ಟ್‌ ನಿಯಮಗಳನ್ನು ಉಲ್ಲಂಘಿಸಿರುವ ವಿಚಾರ ಬೆಳಕಿಗೆ ಬಂತು.

ತಾಜ್ ಮತ್ತು ಖುರೇಷಿ ಮಸೀದಿಗಳಲ್ಲಿದ್ದ 21 ಜಮಾತಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ 17 ಮಂದಿ ವಿದೇಶಿಯರು. ಇವರೆಲ್ಲರನ್ನೂ ಮಾರ್ಚ್ 31ರಿಂದ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು.ಕ್ವಾರಂಟೈನ್‌ನಲ್ಲಿದ್ದವರ ಸೋಂಕಿನ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ.

ADVERTISEMENT

ಬಂಧಿತರ ಮೇಲೆ ಐಪಿಸಿ 269, 270, 271, 188 (ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದ 1897), ಪಾಸ್‌ಪೋರ್ಟ್‌ ಕಾಯ್ದೆ 1967ರ ಅನ್ವಯ ಆರೋಪಗಳನ್ನು ಹೊರಿಸಲಾಗಿದೆ. ಪ್ರಸ್ತುತ ಇವರೆಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.