ADVERTISEMENT

ತಬ್ಲೀಗ್‌ ಸದಸ್ಯರು ಉಗ್ರರು: ಆರತಿ ಲಾಲ್‌ಚಾಂದನಿ ವಿವಾದಾತ್ಮಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 20:00 IST
Last Updated 2 ಜೂನ್ 2020, 20:00 IST
ತಬ್ಲೀಗ್‌ ಸದಸ್ಯರು (ಸಾಂದರ್ಭಿಕ ಚಿತ್ರ)
ತಬ್ಲೀಗ್‌ ಸದಸ್ಯರು (ಸಾಂದರ್ಭಿಕ ಚಿತ್ರ)   

ಲಖನೌ: ‘ತಬ್ಲೀಗ್‌ ಜಮಾತ್‌ನ ಕೋವಿಡ್‌ ಪೀಡಿತ ಸದಸ್ಯರು ‘ಉಗ್ರರು’. ಅವರಿಗೆ ಆಸ್ಪತ್ರೆಗಳಲ್ಲಿ ವಿಐಪಿ ಸೌಲಭ್ಯ ಗಳೊಂದಿಗೆ ಚಿಕಿತ್ಸೆ ನೀಡುವ ಬದಲು ಜೈಲಿಗೆ ಅಟ್ಟಬೇಕು ಅಥವಾ ಕಾಡಿಗೆ ಎಸೆಯಬೇಕು’ ಎಂದು ಉತ್ತರ ಪ್ರದೇಶದ ಕಾನ್ಪುರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರತಿ ಲಾಲ್‌ಚಾಂದನಿ ಹೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

‘ತಬ್ಲೀಗ್‌ ಸದಸ್ಯರು ಸರ್ಕಾರದ ಸಂಪನ್ಮೂಲಗಳನ್ನು ಬರಿದಾಗಿಸುತ್ತಿದ್ದಾರೆ’ ಎಂದೂ ಅವರು ಕೆಲ ದಿನಗಳ ಹಿಂದೆ ಸ್ಥಳೀಯ ವರದಿಗಾರರ ಜೊತೆ ಮಾತನಾಡುವಾಗ ಹೇಳಿದ್ದರು. ಇದು ವಿಡಿಯೊದಲ್ಲಿ ದಾಖಲಾಗಿತ್ತು. ಈ ವಿಡಿಯೊ ಬಹಿರಂಗಗೊಂಡಿದೆ.

‘ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಜತೆ ತಬ್ಲೀಗ್‌ ಸದಸ್ಯರು ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲಲ್ಲಿ ಉಗುಳಿದ್ದಾರೆ ಮತ್ತು ಬಿರಿಯಾನಿಗೂ ಬೇಡಿಕೆ ಇಟ್ಟಿದ್ದರು’ ಎಂದೂ ವಿಡಿಯೊದಲ್ಲಿ ಹೇಳಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.