ADVERTISEMENT

ತಬ್ಲೀಗ್‌ ಜಮಾತ್: 76 ವಿದೇಶಿಗರಿಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

ಪಿಟಿಐ
Published 9 ಜುಲೈ 2020, 14:47 IST
Last Updated 9 ಜುಲೈ 2020, 14:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಪ್ರವಾಸಿ ವೀಸಾದಡಿ ದೇಶಕ್ಕೆ ಬಂದು ಧರ್ಮ ಪ್ರಚಾರ ಮಾಡಿ ನಿಯಮ ಉಲ್ಲಂಘಿಸಿದ್ದ ಆರೋ‍ಪದಡಿ ದೋಷಾರೋಪಪಟ್ಟಿ ದಾಖಲಾಗಿದ್ದ 8 ದೇಶಗಳ 76 ತಬ್ಲೀಗ್‌ ಜಮಾತ್ ಸದಸ್ಯರಿಗೆ ದೆಹಲಿ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗುರ್ಮೋಹಿನಾ ಕೌರ್, ಪ್ರತಿಯೊಬ್ಬರು ₹10 ಸಾವಿರ ವೈಯಕ್ತಿಕ ಬಾಂಡ್‌ ನೀಡುವಂತೆ ಆದೇಶಿಸಿದ್ದಾರೆ.

ಈ ಪ್ರಕರಣದಲ್ಲಿ, ಈವರೆಗೆಮೂವತ್ತು ದೇಶಗಳ 289 ಪ್ರಜೆಗಳಿಗೆ ಜಾಮೀನು ದೊರಕಿದೆ.ಈ ಪ್ರಕರಣ ಸಂಬಂಧ,ಕಳೆದ ಜೂನ್‌ನಲ್ಲಿ 36 ದೇಶಗಳ 956 ವಿದೇಶಿ ಪ್ರಜೆಗಳ ವಿರುದ್ಧ 59 ದೋಷಾರೋಪ ಪಟ್ಟಿಯನ್ನು ಪೊಲೀಸರು ದಾಖಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.