ADVERTISEMENT

ಪ್ರತಿದಾಳಿ ನಡೆಸುವ ಹಕ್ಕಿದೆ: ಚೀನಾಗೆ ತೈವಾನ್‌ ಎಚ್ಚರಿಕೆ

ರಾಯಿಟರ್ಸ್
Published 21 ಸೆಪ್ಟೆಂಬರ್ 2020, 15:35 IST
Last Updated 21 ಸೆಪ್ಟೆಂಬರ್ 2020, 15:35 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ತೈಪೆ: ತಮ್ಮ ಸೇನೆಗೆ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಹಾಗೂ ಪ್ರತಿದಾಳಿ ನಡೆಸುವ ಹಕ್ಕಿದೆ ಎಂದು ಚೀನಾಗೆ ತೈವಾನ್‌ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಕಳೆದ ಕೆಲ ತಿಂಗಳಿಂದ ಚೀನಾ ಹಾಗೂ ತೈವಾನ್‌ ನಡುವಿನ ಬಿಕ್ಕಟ್ಟು ಹೆಚ್ಚಾಗಿದ್ದು, ತೈವಾನ್‌ ತನ್ನ ಭಾಗವೆಂದು ಚೀನಾ ವಾದಿಸುತ್ತಿದೆ. ಅಗತ್ಯವಿದ್ದರೆ ಬಲಪ್ರಯೋಗದಿಂದ ತೈವಾನ್‌ ವಶಪಡಿಸಿಕೊಳ್ಳುತ್ತೇವೆ ಎಂದೂ ತಿಳಿಸಿದೆ. ಇಂಥ ಸ್ಥಿತಿಯ ನಡುವೆಯೇ ಕಳೆದ ವಾರ ಸೂಕ್ಷ್ಮಪ್ರದೇಶವಾಗಿರುವ ತೈವಾನ್ ಸ್ಟ್ರೈಟ್‌ಗೆ ತನ್ನ ಹಲವು ಯುದ್ಧ ವಿಮಾನಗಳನ್ನು ಚೀನಾ ರವಾನಿಸಿದೆ.

‘ಶತ್ರು ರಾಷ್ಟ್ರದ ಯುದ್ಧ ಹಡಗುಗಳು ಹಾಗೂ ವಿಮಾನದಿಂದಾಗಿ ತೈವಾನ್‌ಗೆ ಅಪಾಯ ಎದುರಾಗಿದೆ. ಪ್ರತಿದಾಳಿ ನಡೆಸುವ ಹಕ್ಕು ನಮಗೂ ಇದೆ. ಆದರೆ ನಾವು ಬಿಕ್ಕಟ್ಟು ಇನ್ನಷ್ಟು ಹೆಚ್ಚಬಾರದು ಎನ್ನುವ ಉದ್ದೇಶದಿಂದ ಮಾರ್ಗಸೂಚಿಗಳ ಅನ್ವಯ ನಡೆದುಕೊಂಡಿದ್ದೇವೆ. ಯಾವು ಯಾರನ್ನೂ ಪ್ರಚೋದಿಸುವುದಿಲ್ಲ. ಆದರೆ, ಶತ್ರುಗಳಿಗೂ ನಾವು ಹೆದರುವುದಿಲ್ಲ’ ಎಂದು ತೈವಾನ್‌ ರಕ್ಷಣಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಈ ನಡುವೆ ತೈವಾನ್‌ ಚೀನಾದ ಭಾಗ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ವಾಂಗ್‌ ವೆನ್‌ಬಿನ್‌ ಬೀಜಿಂಗ್‌ನಲ್ಲಿ ಹೇಳಿದ್ದು, ಸ್ಟ್ರೈಟ್‌ ಎನ್ನುವ ಯಾವುದೇ ರೇಖೆ ಇಲ್ಲ ಎಂದಿದ್ದಾರೆ.ಎರಡೂ ರಾಷ್ಟ್ರಗಳ ಯುದ್ಧವಿಮಾನಗಳುತೈವಾನ್‌ ಸ್ಟ್ರೈಟ್‌ ರೇಖೆಯನ್ನು ದಾಟಿ ಹೋಗುವುದಿಲ್ಲ. ಈ ಕುರಿತು ಎರಡೂ ರಾಷ್ಟ್ರಗಳ ನಡುವೆ ಯಾವುದೇ ಅಧಿಕೃತ ಒಪ್ಪಂದಗಳು ಇಲ್ಲದೇ ಇದ್ದರೂ, ಅನಧಿಕೃತವಾಗಿ ಇದನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.