ADVERTISEMENT

ಸುಖಬೀರ್‌ ‘ಧಾರ್ಮಿಕ ಶಿಕ್ಷೆಯ ತಪ್ಪಿತಸ್ಥ’: ತಖ್ತ್‌ ಶ್ರೀ ಪಾಟ್ನಾ ಸಾಹಿಬ್‌ ಘೋಷಣೆ

ಪಿಟಿಐ
Published 5 ಜುಲೈ 2025, 14:53 IST
Last Updated 5 ಜುಲೈ 2025, 14:53 IST
ಸುಖಬೀರ್‌ ಸಿಂಗ್‌ ಬಾದಲ್‌
ಸುಖಬೀರ್‌ ಸಿಂಗ್‌ ಬಾದಲ್‌   

ಚಂಡೀಗಢ: ಬಿಹಾರದ ತಖ್ತ್‌ ಶ್ರೀ ಪಾಟ್ನಾ ಸಾಹಿಬ್‌ನ ನಿರ್ದೇಶನವನ್ನು ನಿರ್ಲಕ್ಷಿಸಿದ ಹಾಗೂ ತನ್ನ ಮುಂದೆ ಹಾಜರಾಗದ ಕಾರಣಕ್ಕೆ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖಬೀರ್‌ ಸಿಂಗ್‌ ಬಾದಲ್‌ ಅವರನ್ನು ‘ಧಾರ್ಮಿಕ ಅಪರಾಧದ ತಪ್ಪಿತಸ್ಥ (ತನ್‌ಖೈಯಾ)’ ಎಂದು ಶನಿವಾರ ಘೋಷಿಸಲಾಗಿದೆ.

ಪಂಜಾಬ್‌ನಲ್ಲಿ 2007ರಿಂದ 2017ರವರೆಗೆ ಶಿರೋಮಣಿ ಅಕಾಲಿ ದಳ ಸರ್ಕಾರವು ಮಾಡಿದ ತಪ್ಪುಗಳಿಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ಅಕಾಲ್‌ ತಖ್ತ್‌ ‘ತನ್‌ಖೈಯಾ’ ಎಂದು ಉಚ್ಚರಿಸಿತ್ತು. ಡಿಸೆಂಬರ್‌ನಲ್ಲಿ ‘ಧಾರ್ಮಿಕ ಶಿಕ್ಷೆ’ ಪ್ರಕಟಿಸಿತ್ತು.

‘ಬಾದಲ್‌ ಅವರನ್ನು ಧಾರ್ಮಿಕ ಅಪರಾಧದ ತಪ್ಪಿತಸ್ಥ’ ಎಂದು ಘೋಷಿಸಲು ಬಿಹಾರದ ಪಾಟ್ನಾದಲ್ಲಿ ತಖ್ತ್‌ ಶ್ರೀ ಪಾಟ್ನಾ ಸಾಹಿಬ್‌ ಜಥೇದಾರ್‌ ಮತ್ತು ‘ಗ್ರಂಥಿ’ ಮುಖ್ಯಸ್ಥ ಗಿಯಾನಿ ಬಲದೇವ್‌ ಸಿಂಗ್‌ ಅವರು ಶುಕ್ರವಾರ ನಿರ್ಧರಿಸಿದ್ದರು.

ADVERTISEMENT

ತಖ್ತ್‌ ಶ್ರೀ ಪಾಟ್ನಾ ಸಾಹಿಬ್‌ ಸಿಖ್‌ ಧರ್ಮದ ಐದು ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಅಮೃತಸರದ ಅಕಾಲ್‌ ತಖ್ತ್‌ ಅತ್ಯುನ್ನತ ಕೇಂದ್ರ‌ವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.