ಚೆನ್ನೈ: ಮಾದಕ ವಸ್ತು ಖರೀದಿ ಮತ್ತು ಸೇವನೆ ಆರೋಪದ ಮೇಲೆ ತಮಿಳು ಮತ್ತು ತೆಲುಗು ನಟ ಶ್ರೀಕಾಂತ್ ಅವರನ್ನು ಮಾದಕವಸ್ತು ನಿಗ್ರಹ ಗುಪ್ತಚರ ಘಟಕವು ಸೋಮವಾರ ಬಂಧಿಸಿದೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿರುವ ಎಐಎಡಿಎಂಕೆ ಐಟಿ ವಿಭಾಗದ ಪದಾಧಿಕಾರಿಯಾಗಿದ್ದ ಪ್ರಸಾದ್ ವಿಚಾರಣೆ ವೇಳೆ ಶ್ರೀಕಾಂತ್ ಅವರ ಹೆಸರು ಪ್ರಸ್ತಾವವಾಗಿತ್ತು. ಈ ಬೆನ್ನಲ್ಲೇ ಚೆನ್ನೈ ಪೊಲೀಸರು ಶ್ರೀಕಾಂತ್ ಅವರನ್ನು ಬಂಧಿಸಿದ್ದಾರೆ.
ಪ್ರಸಾದ್ ಬೆಂಗಳೂರಿನಲ್ಲಿ ನೆಲಸಿರುವ ನೈಜೀರಿಯಾ ಪ್ರಜೆ ಜೀರಿಕ್‌ನಿಂದ ಸಂಗ್ರಹಿಸಿದ ಕೊಕೇನ್ ಅನ್ನು ಶ್ರೀಕಾಂತ್ ಅವರಿಗೆ ಮಾರಾಟ ಮಾಡಿದ್ದ. ಶ್ರೀಕಾಂತ್ ಈ ಡ್ರಗ್ಸ್ ಅನ್ನು ಹಲವು ಸಂದರ್ಭದಲ್ಲಿ ಸೇವಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಶ್ರೀಕಾಂತ್ ಅವರು ಒಂದು ಗ್ರಾಂ ಕೊಕೇನ್‌ಗೆ ₹12,000 ಪಾವತಿ ಮಾಡಿದ್ದರು ಎಂದೂ ತಿಳಿಸಿವೆ.
ಶ್ರೀಕಾಂತ್ 2002ರಲ್ಲಿ ‘ರಾಜಾ ಕೂಟಂ’ ಚಿತ್ರದಲ್ಲಿ ನಟಿಸುವ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅನಂತರ ತೆಲುಗು ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.