ಪುದುಕೊಟ್ಟೈ: ಕೋವಿಡ್–19 ಲಸಿಕೆ ಲಭ್ಯವಾಗುತ್ತಿದ್ದಂತೆ ರಾಜ್ಯದ ಎಲ್ಲ ಜನರಿಗೆ ಉಚಿತವಾಗಿ ರೋಗ ನಿರೋಧಕ ಲಸಿಕೆ ಪೂರೈಕೆ ಮಾಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಗುರುವಾರ ಭರವಸೆ ನೀಡಿದ್ದಾರೆ.
'ಲಸಿಕೆ ಅಭಿವೃದ್ಧಿಯಾಗಿ ರಾಜ್ಯಗಳಿಗೆ ಲಭ್ಯವಾದ ಕೂಡಲೇ ತಮಿಳುನಾಡಿನ ಎಲ್ಲ ಜನರಿಗೆ ರೋಗ ನಿರೋಧಕ ಲಸಿಕೆ ನೀಡಲಾಗುತ್ತದೆ ಹಾಗೂ ಸರ್ಕಾರವೇ ಖರ್ಚು ಭರಿಸಲಿದೆ ಎಂದು ಘೋಷಿಸಲು ಬಯಸುತ್ತೇನೆ' ಎಂದು ಪ್ರಕಟಿಸಿದರು.
ದೇಶದಲ್ಲಿ ಕೆಲವು ತಿಂಗಳಲ್ಲೇ ಕೋವಿಡ್–19 ಲಸಿಕೆ ಲಭ್ಯವಾಗುವ ನಿರೀಕ್ಷೆ ಇರುವುದಾಗಿ ಇತ್ತೀಚೆಗಷ್ಟೇ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಭರವಸೆ ವ್ಯಕ್ತಪಡಿಸಿದ್ದರು. ಪ್ರಸ್ತುತ ಕೋವಿಡ್–19 ಲಸಿಕೆಗಳು ವಿವಿಧ ಹಂತಗಳಲ್ಲಿ ಪ್ರಯೋಗಕ್ಕೆ ಒಳಪಟ್ಟಿದ್ದು, ಮುಂದಿನ ಆರು ತಿಂಗಳಲ್ಲಿ ದೇಶದ ಜನರಿಗೆ ಲಸಿಕೆ ಪೂರೈಕೆ ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.