ADVERTISEMENT

Tamil Nadu Election Results: ತಮಿಳುನಾಡು ಫಲಿತಾಂಶ, ಇಲ್ಲಿವೆ ಮುಖ್ಯಾಂಶ

​ಪ್ರಜಾವಾಣಿ ವಾರ್ತೆ
Published 2 ಮೇ 2021, 11:56 IST
Last Updated 2 ಮೇ 2021, 11:56 IST
ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಪ್ರತಿಪಕ್ಷ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ (ಸಂಗ್ರಹ ಚಿತ್ರ)
ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಪ್ರತಿಪಕ್ಷ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ (ಸಂಗ್ರಹ ಚಿತ್ರ)   

ಚೆನ್ನೈ: ಆಡಳಿತಾರೂಢ ಎಐಎಡಿಎಂಕೆ ಹಾಗೂ ಪ್ರತಿಪಕ್ಷ ಡಿಎಂಕೆ ನಡುವಣ ತೀವ್ರ ಹಣಾಹಣಿಗೆ ಕಾರಣವಾಗಿರುವ ತಮಿಳುನಾಡು ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸುತ್ತಿದೆ, ಗೆದ್ದ ಪ್ರಮುಖರು ಯಾರು, ಸೋತ ಪ್ರಮುಖರು ಯಾರು, ಯಾವ ಕ್ಷೇತ್ರದ ಜನ ಯಾರಿಗೆ ಹೆಚ್ಚು ಮನ್ನಣೆ ನೀಡಿದ್ದಾರೆ? ಮುಖ್ಯಾಂಶಗಳು ಮತ್ತು ಫಲಿತಾಂಶದ ಲೇಟೆಸ್ಟ್ ಅಪ್‌ಡೇಟ್ಸ್ ಇಲ್ಲಿವೆ.

* ಎರಡು ಅವಧಿಯಿಂದ ಪ್ರತಿಪಕ್ಷ ಸ್ಥಾನದಲ್ಲಿರುವಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆಗೆಈ ಬಾರಿ ತಮಿಳುನಾಡು ಗದ್ದುಗೆ ಬಹುತೇಕ ಖಚಿತ

*ಡಿಎಂಕೆ ಮೈತ್ರಿಯು 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ.

ADVERTISEMENT

*ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ಗೆ ಕೊಳತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಜಯ. ಇದು ಅವರ ಸತತ ಏಳನೇ ಚುನಾವಣಾ ಗೆಲುವಾಗಿದೆ.

* ವೈಯಕ್ತಿಕ ಮತ್ತು ಪಕ್ಷದ ಗೆಲುವಿಗಾಗಿಸ್ಟಾಲಿನ್‌ರನ್ನು ಅಭಿನಂದಿಸಿದ ನಟ ರಜನಿಕಾಂತ್.

*ಕಾಂಗ್ರೆಸ್ ಸಂಸದ ಶಶಿ ತರೂರ್‌ರಿಂದ ಸ್ಟಾಲಿನ್‌ಗೆ ಅಭಿನಂದನೆ.

* ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ನಟ, ಮಕ್ಕಳ್‌ ನೀಧಿ ಮಯಂ (ಎಂಎನ್‌ಎಂ) ಪಕ್ಷದ ಸ್ಥಾಪಕ ಕಮಲ ಹಾಸನ್‌ಗೆ ಗೆಲುವು ಬಹುತೇಕ ಖಚಿತ.

* ಸರ್ವರ್ ಕುಸಿತದಿಂದಾಗಿ ಮತ ಎಣಿಕೆ ನಿಧಾನಗತಿಯಲ್ಲಿ ಸಾಗುತ್ತಿದೆ – ಚುನಾವಣಾ ಆಯೋಗ ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.