ADVERTISEMENT

ಕೋವಿಡ್‌-19: ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ದರಕ್ಕೆ ಮಿತಿ ಹೇರಿದ ತಮಿಳುನಾಡು

ಏಜೆನ್ಸೀಸ್
Published 6 ಜೂನ್ 2020, 13:31 IST
Last Updated 6 ಜೂನ್ 2020, 13:31 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಚೆನ್ನೈ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌–19 ಚಿಕಿತ್ಸೆಗೆ ವಿಧಿಸಲಾಗುವದರಕ್ಕೆ ತಮಿಳುನಾಡು ಸರ್ಕಾರ ಶನಿವಾರ ಮಿತಿ ಹೇರಿದೆ.

ಕೋವಿಡ್‌–19 ಚಿಕಿತ್ಸೆಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡುತ್ತಿವೆ ಎನ್ನುವ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸರ್ಕಾರ ಶನಿವಾರಈ ಕ್ರಮ ಕೈಗೊಂಡಿದೆ.

ತುರ್ತು ನಿಗಾ ಘಟಕದಲ್ಲಿ(ಐಸಿಯು) ಒಂದು ದಿನದ ಚಿಕಿತ್ಸೆಗೆ ಗರಿಷ್ಠ ₹15,000 ಹಾಗೂ ಸಾಮಾನ್ಯ ವಾರ್ಡ್‌ಗೆ ದಿನಕ್ಕೆ ಗರಿಷ್ಠ ₹7,500 ನಿಗದಿಪಡಿಸಲಾಗಿದೆ. ‘ನಿಗದಿಪಡಿಸಿದಕ್ಕಿಂತ ಹೆಚ್ಚಿನ ಹಣ ಪಡೆಯಬಾರದು’ ಎಂದು ತಮಿಳುನಾಡು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಖಾಸಗಿ ಆಸ್ಪತ್ರೆಗಳಲ್ಲಿ ಎ1, ಎ2, ಎ3 ಹಾಗೂ ಎ4 ಆಸ್ಪತ್ರೆಗಳಾಗಿ ವಿಭಾಗಿಸಲಾಗಿದೆ. ಸಾಮಾನ್ಯ ವಾರ್ಡ್‌ಗೆ ದಾಖಲಾಗಿರುವ ಸೋಂಕಿನ ಲಕ್ಷಣಗಳು ಇಲ್ಲದಿರುವ ಅಥವಾ ಸೋಂಕಿನ ಆರಂಭಿಕ ಲಕ್ಷಣಗಳು ಇರುವ ರೋಗಿಗಳಿಗೆಎ1 ಹಾಗೂ ಎ2 ಆಸ್ಪತ್ರೆಗಳಲ್ಲಿ ದಿನಕ್ಕೆ ಗರಿಷ್ಠ ₹7,500 ಹಾಗೂ ಎ3, ಎ4 ಆಸ್ಪತ್ರೆಗಳಲ್ಲಿ ದಿನಕ್ಕೆ ಗರಿಷ್ಠ ₹5,000ಕ್ಕಿಂತ ಅಧಿಕ ಹಣ ಪಡೆಯಬಾರದು ಎಂದು ಇಲಾಖೆ ಸೂಚಿಸಿದೆ. ನಾಲ್ಕೂ ವಿಭಾಗಗಳಲ್ಲಿಐಸಿಯುನಲ್ಲಿ ಚಿಕಿತ್ಸೆಗೆ ಗರಿಷ್ಠ ₹15 ಸಾವಿರ ನಿಗದಿಪಡಿಸಲಾಗಿದೆ.

ಕೋವಿಡ್‌–19 ಚಿಕಿತ್ಸೆಯನ್ನು ಮುಖ್ಯಮಂತ್ರಿಗಳ ಆರೋಗ್ಯ ವಿಮೆ ಯೋಜನೆಯಡಿ ತಂದ ಕೆಲವೇ ದಿನಗಳಲ್ಲಿ ತಮಿಳುನಾಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.