ಚೆನ್ನೈ: ಸಿನಿಮೀಯ ಮಾದರಿಯಲ್ಲಿ ಮಾದಕ ವಸ್ತು ಕಳ್ಳ ಸಾಗಣೆಗೆ ಯತ್ನಿಸಿದ್ದ ವಿದೇಶಿ ಪ್ರಜೆಯನ್ನು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಎಎನ್‌ಐ ಟ್ವೀಟಿಸಿದೆ.
ಎಟೆಬ್ಬೆಯಿಂದ ಬಂದಿದ್ದ ತಾಂಜೇನಿಯಾದ ವ್ಯಕ್ತಿ ಸುಮಾರು ₹ 8.86 ಕೋಟಿ ಬೆಲೆ ಬಾಳುವ ಹೆರಾಯಿನ್ ಇದ್ದ 86 ಕ್ಯಾಪ್ಸೂಲ್ ಗಳನ್ನು ನುಂಗಿದ್ದ. ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳ ತಪಾಸಣೆ ವೇಳೆ ಡ್ರಗ್ಸ್ ಇರುವುದು ಪತ್ತೆಯಾಗಿದೆ.
ಮಾದಕ ವಸ್ತುವನ್ನು ವಶಕ್ಕೆ ಪಡೆದಿರುವ ಪೊಲೀಸರು, ತಾಂಜೇನಿಯಾ ಪ್ರಜೆಯನ್ನು ಬಂಧಿಸಿದ್ದಾರೆ.
ತಮಿಳಿನ ಅಯನ್ ಚಿತ್ರದಲ್ಲಿ ತೋರಿಸಿದಂತೆ ಹೆರಾಯಿನ್ ತುಂಬಿದ್ದ ರೇಷ್ಮೆ ಗೂಡಿನ ಆಕಾರದ ಕ್ಯಾಪ್ಶೂಲ್‌ಗಳನ್ನು ಈತ ನುಂಗಿರುವುದು ಬೆಳಕಿಗೆ ಬಂದಿದೆ. ಜುಲೈ 14ರಂದೆ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.