ಶಬರಿಮಲೆ: ವಿಷು (ಸೌರಮಾನ ಯುಗಾದಿ) ಹಬ್ಬದ ಪ್ರಯುಕ್ತ ಇಂದು (ಸೋಮವಾರ) ಅಯ್ಯಪ್ಪ ಸ್ವಾಮಿ ಚಿತ್ರವಿರುವ ಚಿನ್ನದ ಲಾಕೆಟ್‌ಗಳನ್ನು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೊರತಂದಿದೆ.
ಕೇರಳದ ಶಬರಿಮಲೆ ದೇವಸ್ಥಾನದ ಗರ್ಭಗುಡಿಯಲ್ಲಿ ಇರಿಸಲಾಗಿದ್ದ ಲಾಕೆಟ್‌ಗಳನ್ನು ಆನ್‌ಲೈನ್ ಮೂಲಕ ಬುಕ್ ಮಾಡಿದ ಭಕ್ತರಿಗೆ ವಿತರಿಸುವ ಕಾರ್ಯಕ್ರಮಕ್ಕೆ ಸಚಿವ ವಿ.ಎನ್. ವಾಸವನ್ ಚಾಲನೆ ನೀಡಿದರು.
ದೇವಾಲಯ ಹತ್ತಿರದ ಕೋಡಿಮರದ ಕೆಳಗೆ ಬೆಳಿಗ್ಗೆ ಲಾಕೆಟ್ ವಿತರಣಾ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಿತು. ಈ ಮೂಲಕ ಅಯ್ಯಪ್ಪ ಭಕ್ತರ ಬಹುದಿನಗಳ ಬೇಡಿಕೆ ಈಡೇರಿದೆ ಎಂದು ಟಿಡಿಬಿ ತಿಳಿಸಿದೆ.
ಆನ್‌ಲೈನ್ ಮೂಲಕ ಬುಕ್ ಮಾಡಿದ ಆಂಧ್ರಪ್ರದೇಶದ ವ್ಯಕ್ತಿಯೊಬ್ಬರಿಗೆ ಮೊದಲ ಲಾಕೆಟ್ ವಿತರಿಸಲಾಗಿದೆ.
ಚಿನ್ನದ ಲಾಕೆಟ್‌ಗಳು 2 ಗ್ರಾಂ, 4 ಗ್ರಾಂ ಮತ್ತು 8 ಗ್ರಾಂ ತೂಕದಲ್ಲಿ ತಯಾರಿಸಲಾಗಿದೆ ಎಂದು ಟಿಡಿಬಿ ತಿಳಿಸಿದೆ.
ಬುಕಿಂಗ್ ಪ್ರಾರಂಭವಾದ 2 ದಿನಗಳಲ್ಲಿ 100ಕ್ಕೂ ಹೆಚ್ಚು ಭಕ್ತರು ಲಾಕೆಟ್‌ಗಳನ್ನು ಬುಕ್ ಮಾಡಿದ್ದಾರೆ ಎಂದು ಟಿಡಿಬಿ ಹೇಳಿಕೆ ತಿಳಿಸಿದೆ.
2 ಗ್ರಾಂ ಚಿನ್ನದ ಲಾಕೆಟ್ ಬೆಲೆ ₹19,300, 4 ಗ್ರಾಂ ಲಾಕೆಟ್ ಬೆಲೆ ₹ 38,600 ಮತ್ತು 8 ಗ್ರಾಂ ತೂಕದ ಚಿನ್ನದ ಲಾಕೆಟ್ ಬೆಲೆ ₹77,200 ಎಂದು ಟಿಡಿಬಿ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.