ADVERTISEMENT

ಅಲಿಗಢ ಮುಸ್ಲಿಂ ವಿವಿ ಆವರಣದಲ್ಲಿ ಗುಂಡಿಕ್ಕಿ ಶಿಕ್ಷಕನ ಹತ್ಯೆ

ಪಿಟಿಐ
Published 25 ಡಿಸೆಂಬರ್ 2025, 10:09 IST
Last Updated 25 ಡಿಸೆಂಬರ್ 2025, 10:09 IST
   

ಅಲಿಗಢ: ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಆವರಣದಲ್ಲಿ ಶಾಲಾ ಶಿಕ್ಷಕರೊಬ್ಬರನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಮೃತರನ್ನು ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಎಬಿಕೆ ಯೂನಿಯನ್ ಹೈಸ್ಕೂಲ್‌ನ ಶಿಕ್ಷಕ ರಾವ್ ಡ್ಯಾನಿಶ್ ಅಲಿ ಎಂದು ಗುರುತಿಸಲಾಗಿದೆ.

ಬುಧವಾರ ರಾತ್ರಿ ಸಹೋದ್ಯೋಗಿಗಳೊಂದಿಗೆ ಅಲಿ ಅವರು ವಾಕಿಂಗ್‌ ಮಾಡುತ್ತಿದ್ದ ವೇಳೆ ಕೆಲವು ಅಪರಿಚಿತರು ಮಾಸ್ಕ್‌ ಧರಿಸಿಕೊಂಡು ಬಂದು ಗುಂಡು ಹಾರಿಸಿದ್ದಾರೆ. ಗುಂಡು ತಗುಲುತ್ತಿದ್ದಂತೆ ಅಲಿ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಜವಾಹರಲಾಲ್ ನೆಹರು ಕಾಲೇಜ್ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲೇ ಮೃತಪಟ್ಟಿದ್ದರು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.

ADVERTISEMENT

ಗುಂಡು ಹಾರಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಕತ್ತಲು ಮತ್ತು ಮಂಜು ಇದ್ದ ಕಾರಣ ವಿಡಿಯೊ ಸ್ಪಷ್ಟವಾಗಿಲ್ಲ, ವಿಶ್ವವಿದ್ಯಾಲಯದ ಬಳಿ ಇರುವ ಇತರ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.