ADVERTISEMENT

ಶ್ರೀನಗರ: ಸರ್ಕಾರಿ ಶಾಲೆಯ ಮೇಲೆ ಉಗ್ರರ ದಾಳಿ; ಇಬ್ಬರು ಶಿಕ್ಷಕರ ಹತ್ಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2021, 7:10 IST
Last Updated 7 ಅಕ್ಟೋಬರ್ 2021, 7:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಇಲ್ಲಿನ ಸರ್ಕಾರಿ ಶಾಲೆಯ ಮೇಲೆ ಉಗ್ರರು ದಾಳಿ ನಡೆಸಿದ್ದು, ಇಬ್ಬರು ಶಿಕ್ಷಕರನ್ನು ಹತ್ಯೆ ಮಾಡಲಾಗಿದೆ. ಈಡ್ಗಾ ಸಂಗಮ್‌ ಪ್ರದೇಶದಲ್ಲಿರುವ ಶಾಲೆಯಲ್ಲಿಉಗ್ರರದಾಳಿ ನಡೆದಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ.

ಉಗ್ರರು ಗುರುವಾರ ಬೆಳಿಗ್ಗೆ ಶಾಲೆಯೊಳಗೆ ಪ್ರವೇಶಿಸಿ ಮುಖ್ಯೋಪಾಧ್ಯಾಯ ಮತ್ತು ಮತ್ತೊಬ್ಬ ಶಿಕ್ಷಕರ ಹತ್ಯೆ ನಡೆಸಿದ್ದಾರೆ. ಬಾಲಕರ ಹೈಯರ್‌ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಸತಿಂದರ್ ಕೌರ್‌ ಮತ್ತು ಶಿಕ್ಷಕ ದೀಪಕ್‌ ಮೃತರು. ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ವರದಿಯಾಗಿದೆ.

ಇಕ್ಬಾಲ್‌ ಉದ್ಯಾನದಲ್ಲಿ ಕಾಶ್ಮೀರ ಪಂಡಿತ, ಶ್ರೀನಗರದ ಪ್ರಮುಖ ಔಷಧ ಅಂಗಡಿ ಮಾಲೀಕ ಮಖಾನ್‌ ಲಾಲ್‌ ಬಿಂದ್ರೂ ಅವರ ಮೇಲೆ ಮಂಗಳವಾರ ಉಗ್ರರು ಗುಂಡಿನ ದಾಳಿ ನಡೆಸಿದ್ದರು.1990ರಲ್ಲಿ ಭಯೋತ್ಪಾದಕ ಕೃತ್ಯಗಳು ಆರಂಭವಾದ ನಂತರ ಕಾಶ್ಮೀರದಿಂದ ವಲಸೆ ಹೋಗದೆ ಅಲ್ಲಿಯೇ ಉಳಿದಿದ್ದ ಕೆಲವೇ ಕಾಶ್ಮೀರ ಪಂಡಿತರಲ್ಲಿ ಬಿಂದ್ರೂ ಸಹ ಒಬ್ಬರು

ADVERTISEMENT

ಮೂರು ದಿನಗಳಲ್ಲಿ ಐವರು ನಾಗರಿಕರ ಮೇಲೆ ದಾಳಿ ನಡೆದಿದ್ದು, ಶ್ರೀನಗರದಲ್ಲಿನಾಲ್ವರ ಹತ್ಯೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.