ಸುಪ್ರೀಂ ಕೋರ್ಟ್
ನವದೆಹಲಿ: ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಟೆಕಿ ಅತುಲ್ ಸುಭಾಷ್ ಅವರ ತಾಯಿ ಅಂಜು ದೇವಿ ಅವರು, ಮೊಮ್ಮಗನನ್ನು ತಮ್ಮ ಸುಪರ್ದಿಗೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಅಂಜು ದೇವಿ ಅವರು, ನಾಲ್ಕು ವರ್ಷ ವಯಸ್ಸಿನ ಮೊಮ್ಮಗನನ್ನು ತಮ್ಮ ಸುಪರ್ದಿಗೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಗಳಾದ ಬಿ.ವಿ.ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ನ್ಯಾಯಪೀಠವು ಸೋಮವಾರ ನಡೆಸಿತು.
ಕೋರ್ಟ್ ಸೂಚನೆಯಂತೆ, ಮಗುವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರು ಪಡಿಸಲಾಗಿತ್ತು. ಆಗ ಮಗುವಿ ನೊಂದಿಗೆ ಮಾತುಕತೆ ನಡೆಸಿದ ಪೀಠವು, ಮಗುವು ತನ್ನ ತಾಯಿಯ ಸುಪರ್ದಿಯಲ್ಲಿಯೇ ಇರುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು.
‘ಮಗುವು ತನ್ನ ಅಜ್ಜಿಯೊಂದಿಗೆ ಅತಿ ಕಡಿಮೆ ಸಮಯ ಕಳೆದಿದೆ. ಹಾಗಾಗಿ, ಮಗುವು ಸದ್ಯ ತನ್ನ ತಾಯಿಯ ಸುಪರ್ದಿಯಲ್ಲಿರು ವುದೇ ಉತ್ತಮ’ ಎಂದು ಸೂಚ್ಯವಾಗಿ ಹೇಳಿತು.
ಜ.7ರಂದು ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಅರ್ಜಿದಾರರಾದ ಅಂಜು ದೇವಿ ಅವರು ಮಗುವಿಗೆ ಅಪರಿಚಿತರು ಎಂದು ಹೇಳಿ ಮನವಿಯನ್ನು ತಿರಸ್ಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.