ADVERTISEMENT

ತಾಂತ್ರಿಕ ದೋಷ: ವಿಮಾನ ಸಂಚಾರ ವಿಳಂಬ

ಪಿಟಿಐ
Published 29 ಏಪ್ರಿಲ್ 2019, 19:13 IST
Last Updated 29 ಏಪ್ರಿಲ್ 2019, 19:13 IST

ನವದೆಹಲಿ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಲಸೆ ವೀಸಾ ನಿರ್ವಹಣಾ ಸರ್ವರ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ, ಪ್ರಯಾಣಿಕರು ಪರದಾಡುವಂತಾಯಿತು.ಸುಮಾರು ಒಂದೂವರೆ ಗಂಟೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು,ವಿಶ್ವದ ವಿವಿಧ ಕಡೆ ತೆರಳಬೇಕಾಗಿದ್ದ ಆರು ವಿಮಾನಗಳ ಸಂಚಾರ ವಿಳಂಬವಾಯಿತು.

ಮಧ್ಯಾಹ್ನ 12.15ರಿಂದ 1.45ರವರೆಗೆ ಸಮಸ್ಯೆ ಕಾಣಿಸಿಕೊಂಡಿತ್ತು.ಸರ್ವರ್‌ ಸಮಸ್ಯೆಯಿಂದ ವಲಸಿಗರ ವೀಸಾ ಪರಿಶೀಲನೆ ತಡವಾ
ಯಿತು.ಆರು ವಿಮಾನಗಳಲ್ಲಿ ಮೂರು ಏರ್‌ ಇಂಡಿಯಾ ಸಂಸ್ಥೆಯದ್ದಾಗಿವೆ.

ವಿಮಾನ ವಿಳಂಬದಿಂದ ತೊಂದರೆ ಎದುರಿಸಿದ ನೂರಾರು ಪ‍್ರಯಾಣಿಕರು, ಕೌಂಟರ್‌ಗಳಲ್ಲಿ ಕಾಯುತ್ತಾ ನಿಂತಿರುವ ಚಿತ್ರ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.ವಿಮಾನ ನಿಲ್ದಾಣದಲ್ಲಿ ಚೆಕ್‌–ಇನ್‌ ವ್ಯವಸ್ಥೆಗೆ ಬಳಸುವ ತಂತ್ರಜ್ಞಾನದಲ್ಲಿ ಸಮಸ್ಯೆ ಉಂಟಾದ ಕಾರಣ, ಏರ್ ಇಂಡಿಯಾದ 155ಕ್ಕೂ ಹೆಚ್ಚು ವಿಮಾನಗಳ ಸಂಚಾರ ವಿಳಂಬವಾದ ಬೆನ್ನಲ್ಲೇ ಈ ಘಟನೆ ನಡೆದಿದೆ. ಸೋಮವಾರ ಕೂಡ ಏರ್‌ ಇಂಡಿಯಾದ 29 ವಿಮಾನಗಳ ಸಂಚಾರ ವಿಳಂಬವಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.