ADVERTISEMENT

ಭುವನೇಶ್ವರಕ್ಕೆ ಹೊರಟಿದ್ದ ಇಂಡಿಗೊ ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆ

ಪಿಟಿಐ
Published 23 ಜೂನ್ 2025, 7:10 IST
Last Updated 23 ಜೂನ್ 2025, 7:10 IST
<div class="paragraphs"><p>&nbsp;ಇಂಡಿಗೊ ವಿಮಾನ</p></div>

 ಇಂಡಿಗೊ ವಿಮಾನ

   

ಇಂದೋರ್: ಇಂದೋರ್‌ನಿಂದ ಭುವನೇಶ್ವರಕ್ಕೆ 140 ಜನರನ್ನು ಹೊತ್ತೊಯ್ಯುತ್ತಿದ್ದ ಇಂಡಿಗೊ ವಿಮಾನದಲ್ಲಿ ಸಣ್ಣ ತಾಂತ್ರಿಕ ದೋಷ ಪತ್ತೆಯಾಗಿದೆ. ಇದರಿಂದಾಗಿ ಅದು ನಿಗದಿತ ಸಮಯಕ್ಕಿಂತ ಸುಮಾರು ಒಂದು ಗಂಟೆ ತಡವಾಗಿ ಹೊರಟಿತು ಎಂದು ಇಲ್ಲಿನ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

'6E 6332' ಇಂಡಿಗೊ ವಿಮಾನ ವಿಮಾನವು ಟೇಕ್-ಆಫ್‌ಗಾಗಿ ರನ್‌ವೇ ಕಡೆಗೆ ಸಾಗುತ್ತಿದ್ದಾಗ ತಾಂತ್ರಿಕ ದೋಷ ಇರುವುದನ್ನು ಪೈಲಟ್‌ಗಳು ಗಮನಿಸಿದರು ಎಂದು ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣದ ನಿರ್ದೇಶಕಿ ವಿಪಿನ್ ಕಾಂತ್ ಸೇಠ್ ತಿಳಿಸಿದ್ದಾರೆ.

ADVERTISEMENT

ಬಳಿಕ ವಿಮಾನವನ್ನು ಮತ್ತೆ ಏಪ್ರನ್‌ಗೆ(ವಿಮಾನ ಕಾರ್ಯಾಚರಿಸುವ ಪ್ರದೇಶ) ತರಲಾಯಿತು. ಎಂಜಿನಿಯರ್‌ಗಳು ಸಣ್ಣ ತಾಂತ್ರಿಕ ದೋಷವನ್ನು ಸರಿಪಡಿಸಿದರು. ಬಳಿಕ ವಿಮಾನವು ತನ್ನ ಗಮ್ಯಸ್ಥಾನಕ್ಕೆ ಹೊರಟಿತು ಎಂದು ಅವರು ಹೇಳಿದ್ದಾರೆ.

ವಿಮಾನ ಸೋಮವಾರ ಬೆಳಿಗ್ಗೆ 9ಗಂಟೆಗೆ ಹೊರಡಬೇಕಿತ್ತು. ಆದರೆ ಸಣ್ಣ ತಾಂತ್ರಿಕ ದೋಷ ಪತ್ತೆಯಾಗಿದ್ದು, ದುರಸ್ತಿಯ ಬಳಿಕ ಬೆಳಿಗ್ಗೆ 10.16ಕ್ಕೆ ಹೊರಟಿತು ಎಂದು ವಿಮಾನ ನಿಲ್ದಾಣದ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.