ADVERTISEMENT

ಕಾಶಿ ವಿಶ್ವನಾಥ ದೇಗುಲದ ನಿಷೇಧಿತ ವಲಯ ಪ್ರವೇಶ: ತನಿಖೆಗೆ ಆದೇಶ

ವಿಡಿಯೊ ವೈರಲ್‌

ಪಿಟಿಐ
Published 14 ಜೂನ್ 2025, 15:33 IST
Last Updated 14 ಜೂನ್ 2025, 15:33 IST
ತೇಜ್‌ ಪ್ರತಾಪ್‌ ಯಾದವ್‌ 
ತೇಜ್‌ ಪ್ರತಾಪ್‌ ಯಾದವ್‌    

ವಾರಾಣಸಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಅವರ ಪುತ್ರ, ಮಾಜಿ ಸಚಿವ ತೇಜ್‌ ಪ್ರತಾಪ್‌ ಯಾದವ್‌ ಅವರು ಕಾಶಿಯ ವಿಶ್ವನಾಥ ದೇಗುಲದ ನಿಷೇಧಿತ ವಲಯ ಪ್ರವೇಶಿಸಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ದೇವಾಲಯದ ಆಡಳಿತವು ತನಿಖೆಗೆ ಆದೇಶಿಸಿದೆ. 

ಕಾಶಿ ವಿಶ್ವನಾಥ ದೇಗುಲದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಶ್ವಭೂಷಣ್‌ ಮಿಶ್ರಾ ಈ ಬಗ್ಗೆ ಮಾಹಿತಿ ನೀಡಿದ್ದು, ‘ವಿಡಿಯೊ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಈ ವಿಚಾರ ದೇವಾಲಯದ ಆಡಳಿತದ ಗಮನಕ್ಕೆ ಬಂದಿದೆ. ದೇಗುಲದ ಭದ್ರತೆಯ ಹೊಣೆ ಹೊತ್ತಿರುವ ಸಿಆರ್‌ಪಿಎಫ್‌ ಹಾಗೂ ಸ್ಥಳೀಯ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿ, ತನಿಖೆಗೆ ಆದೇಶಿಸಲಾಗಿದೆ. ಜತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದೇವೆ’ ಎಂದಿದ್ದಾರೆ.

ಜತೆಗೆ ನಿಷೇಧಿತ ವಲಯದಲ್ಲಿ ಮೊಬೈಲ್‌ ಬಳಕೆಯನ್ನೂ ನಿರ್ಬಂಧಿಸಲಾಗಿದೆ. ಆದಾಗ್ಯೂ ವಿಡಿಯೊ ಚಿತ್ರೀಕರಿಸಲಾಗಿದ್ದು, ಭದ್ರತಾ ಏಜೆನ್ಸಿಗಳಿಗೆ ಹೆಚ್ಚಿನ ನಿಗಾವಹಿಸಲು ಸೂಚಿಸಿರುವುದಾಗಿಯೂ ಮಿಶ್ರಾ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.