ADVERTISEMENT

ಅನಧಿಕೃತ ಎರಡನೇ ಹೆಂಡತಿಯಿಂದ ಮಗು ಪಡೆದ್ರಾ ತೇಜ್ ಪ್ರತಾಪ್? ವಿರೋಧಿಗಳ ಕುಹಕ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 7:49 IST
Last Updated 9 ಫೆಬ್ರುವರಿ 2026, 7:49 IST
ತೇಜ್ ಪ್ರತಾಪ್ ಯಾದವ್
ತೇಜ್ ಪ್ರತಾಪ್ ಯಾದವ್   

ಬೆಂಗಳೂರು: ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಮತ್ತೊಮ್ಮೆ ವಿಚಲೀತರಾಗಿದ್ದಾರೆ.‌

ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತೇಜ್ ಪ್ರತಾಪ್ ಯಾದವ್ ಅವರು ಮತ್ತೊಂದು ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡಿ ಅವರು ಆರ್‌ಜೆಡಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಆಗುವಂತಾಯಿತು.

ಇದೀಗ ಆ ಎರಡನೇ ಹೆಂಡತಿಯಿಂದ ತೇಜ್ ಪ್ರತಾಪ್, ಮಗು ಮಾಡಿಕೊಂಡಿದ್ದಾರೆ ಎಂದು ವದಂತಿ ಎಬ್ಬಿಸಲಾಗಿದೆ.

ADVERTISEMENT

ಇದರ ಬಗ್ಗೆ ಪಟ್ನಾದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಆರ್‌ಜೆಡಿ ನಾಯಕರ ವಿರುದ್ಧ ಹರಿಹಾಯ್ದಿರುವ ತೇಜ್ ಪ್ರತಾಪ್, ಆರ್‌ಜೆಡಿಯ ಕೆಲವು ಸಂಸದರು ಶಾಸಕರು ಬೇಕಂತಲೇ ಇಂತಹ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಸಂಪೂರ್ಣವಾಗಿ ನನ್ನ ರಾಜಕೀಯ ಭವಿಷ್ಯ ಮುಗಿಸಲು ಹೀಗೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ತಮ್ಮ ಹಿರಿಯ ಮಗ ತೇಜ್‌ ಪ್ರತಾಪ್‌ ಅವರನ್ನು ಪಕ್ಷ ಹಾಗೂ ಕುಟುಂಬದಿಂದ ಮೇ 25ರಂದು ಹೊರಹಾಕಿದ್ದಾರೆ. ಮಗನ ಕಾರ್ಯಗಳು ಬೇಜವಾಬ್ದಾರಿಯಿಂದ ಕೂಡಿದ್ದು, ಸಾರ್ವಜನಿಕ ನಡವಳಿಕೆಗೆ ಅನುಗುಣವಾಗಿಲ್ಲ ಎಂಬ ಕಾರಣ ನೀಡಿ ಈ ಕ್ರಮ ಕೈಗೊಂಡಿದ್ದಾರೆ.

ಈ ಹಿಂದೆ ತೇಜ ಪ್ರತಾಪ್, ತಮ್ಮ ಫೇಸ್‌ಬುಕ್ ಖಾತೆಯಲ್ಲಿ, ‘ನಾನು ಅನುಷ್ಕಾ ಯಾದವ್‌ ಅವರ ಜೊತೆ ಕಳೆದ 12 ವರ್ಷಗಳಿಂದ ಸಂಬಂಧದಲ್ಲಿದ್ದೇನೆ. ಇದನ್ನು ಮೊದಲೇ ಹೇಳಬೇಕೆಂದಿದ್ದೆ. ಆದರೆ ಕಾಲ ಕೂಡಿ ಬಂದಿರಲಿಲ್ಲ. ಇದನ್ನು ನೀವು ಅರ್ಥ ಮಾಡಿಕೊಳ್ಳುತ್ತಿರೆಂದು ಭಾವಿಸಿದ್ದೇನೆ’ ಎಂದು ಹೇಳಿದ್ದರು.

ಈ ಪೋಸ್ಟ್ ನಂತರ ಸಾಮಾಜಿಕ ತಾಣಗಳಲ್ಲಿ ತೇಜ ಪ್ರತಾಪ್ ಹಾಗೂ ಅನುಷ್ಕಾ ಅವರು ಜೊತೆಯಾಗಿರುವ ಮತ್ತು ಖಾಸಗಿ ಕ್ಷಣಗಳ ಫೋಟೊ ವಿಡಿಯೊಗಳು ಹರಿದಾಡಿದ್ದವು.

ಲಾಲು ಅವರ ಕಿರಿಯ ಮಗ ತೇಜಸ್ವಿ ಯಾದವ್‌ ಅವರು ಸದ್ಯ ಆರ್‌ಜೆಡಿ ಪಕ್ಷದ ನೇತೃತ್ವ ವಹಿಸಿದ್ದಾರೆ.

ಲಾಲು ಪ್ರಸಾದ್‌ ಹಾಗೂ ಅವರ ಪತ್ನಿ ರಾಬ್ರಿ ದೇವಿ – ಇಬ್ಬರೂ ಬಿಹಾರದ ಮುಖ್ಯಮಂತ್ರಿಗಳಾಗಿದ್ದರು. ಈ ದಂಪತಿಗೆ ತೇಜ್‌ ಪ್ರತಾಪ್‌ ಯಾದವ್‌, ತೇಜಸ್ವಿ ಯಾದವ್‌ ಸೇರಿದಂತೆ ಒಟ್ಟು 9 ಮಕ್ಕಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.