ADVERTISEMENT

ತೇಜ್ ಪ್ರತಾಪ್ ಯಾದವ್‍ ಅವರ ಭದ್ರತಾ ಸಿಬ್ಬಂದಿಯಿಂದ ಛಾಯಾಗ್ರಾಹಕನ ಮೇಲೆ ಹಲ್ಲೆ

ಏಜೆನ್ಸೀಸ್
Published 19 ಮೇ 2019, 12:03 IST
Last Updated 19 ಮೇ 2019, 12:03 IST
   

ನವದೆಹಲಿ: ಆರ್‌ಜೆಡಿ ನಾಯಕಲಾಲೂ ಪ್ರಸಾದ್ ಯಾದವ್ ಅವರಪುತ್ರ ತೇಜ್ ಪ್ರತಾಪ್ ಯಾದವ್ ಅವರ ಭದ್ರತಾ ಸಿಬ್ಬಂದಿ ಭಾನುವಾರ ಪತ್ರಿಕಾಛಾಯಾಗ್ರಾಹರೊಬ್ಬರ ಮೇಲೆ ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಹಲ್ಲೆಗೊಳಗಾದ ಛಾಯಾಗ್ರಾಹಕ ತೇಜ್ ಯಾದವ್‌ನ ಕಾರಿಗೆ ಹಾನಿ ಮಾಡಿದ್ದ ಎಂದು ಆರೋಪಿಸಲಾಗಿದೆ. ತೇಜ್ ಯಾದವ್ ಮತಚಲಾಯಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ.

ತೇಜ್ ಯಾದವ್ ಹೇಳಿದ್ದೇನು?
ಈ ಘಟನೆ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ತೇಜ್, ನನ್ನ ಬೌನ್ಸರ್‌ಗಳು ಯಾರ ಮೇಲೂ ಹಲ್ಲೆ ನಡೆಸಿಲ್ಲ.ನಾನುಮತಗಟ್ಟೆಗೆ ಹೋದಾಗ ಕೆಲವೊಂದು ಮಾಧ್ಯಮದವರು ನನ್ನ ವಾಹನವನ್ನು ಸುತ್ತುವರಿದಿದ್ದಾರೆ.ಅದರಲ್ಲಿ ಒಬ್ಬ ಛಾಯಾಗ್ರಾಹಕ ನನ್ನ ಕಾರಿನ ವಿಂಡ್‌ಸ್ಕ್ರೀನ್‌ ಒಡೆದು ಹಾಕಿದ್ದಾನೆ.
ಈ ಪ್ರಕರಣದ ಬಗ್ಗೆ ನಾನು ಎಫ್‌ಐಆರ್ ದಾಖಲಿಸಿದ್ದೇನೆ. ಈ ಹಿಂದೆಯೂ ನನಗೆ ಬೆದರಿಕೆಗಳು ಬಂದಿತ್ತು. ನನ್ನ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ನನ್ನನ್ನು ಹತ್ಯೆ ಮಾಡಲು ಇದೊಂದು ಸಂಚು ಆಗಿದ್ದು, ಪೂರ್ವಯೋಜಿತ ಕೃತ್ಯ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.