ADVERTISEMENT

ತೇಜಸ್ವಿ ಸಿಎಂ ಆಗಿದ್ದರೇ ಬಿಹಾರ ಜಂಗಲ್‌ ರಾಜ್ಯ ಆಗುತ್ತಿತ್ತು: ಉಮಾ ಭಾರತಿ

ಏಜೆನ್ಸೀಸ್
Published 12 ನವೆಂಬರ್ 2020, 5:00 IST
Last Updated 12 ನವೆಂಬರ್ 2020, 5:00 IST
ಉಮಾ ಭಾರತಿ
ಉಮಾ ಭಾರತಿ   

ಭೋಪಾಲ್: ಮಹಾಘಟಬಂಧನ್ ಅಧಿಕಾರಕ್ಕೆ ಬಂದಿದ್ದರೆ ಬಿಹಾರ ಮತ್ತೆ ‘ಜಂಗಲ್‌ ರಾಜ್ಯ’ ಆಗುತ್ತಿತ್ತು ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಅಭಿಪ್ರಾಯಪಟ್ಟಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಸ್ವಾಗತಿಸಿರುವ ಉಮಾ ಭಾರತಿ, ಮಹಾಘಟಬಂಧನ್ ನಾಯಕ ತೇಜಸ್ವಿ ಯಾದವ್ ಅವರಚುನಾವಣೆ ಹೋರಾಟವನ್ನು ಹೊಗಳಿದ್ದಾರೆ.

ತೇಜಸ್ವಿ ಯಾದವ್‌ ಒಳ್ಳೆಯ ಹುಡುಗ, ಆದರೆ ಅವರಿಗೆ ರಾಜಕೀಯ ಮತ್ತು ಆಡಳಿತದ ಅನುಭವ ಕಡಿಮೆ. ಒಂದು ಪಕ್ಷ ತೇಜಸ್ವಿ ಮುಖ್ಯಮಂತ್ರಿಯಾಗಿದ್ದಾರೆ, ಅವರ ತಂದೆ ಲಾಲು ಪ್ರಸಾದ್‌ ಹಿಂಬಾಗಿಲಿನಿಂದ ಆಡಳಿತ ನಡೆಸುತ್ತಿದ್ದರು. ಆಗ ಬಿಹಾರ ಮತ್ತೆ ಜಂಗಲ್‌ ರಾಜ್ಯ ಆಗುತ್ತಿತ್ತು ಎಂದು ಹೇಳಿದ್ದಾರೆ.

ADVERTISEMENT

ಈ ಹಿನ್ನೆಲೆಯಲ್ಲಿ ಮಹಾಘಟಬಂಧನ ಅಧಿಕಾರಕ್ಕೆ ಬರದಿರುವುದೇ ಒಳ್ಳೆಯ ಬೆಳವಣಿಗೆ ಎಂದು ಅವರು ಬಿಹಾರ ವಿಧಾನಸಭಾ ಫಲಿತಾಂಶವನ್ನು ವಿಶ್ಲೇಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.