ದೇಣಿಗೆ ನೀಡಿದ ಶಾಸಕ
ಹೈದರಾಬಾದ್: ಮಿರಿಯಾಲ್‌ಗುಡ ಕಾಂಗ್ರೆಸ್ ಶಾಸಕ ಬಾತುಲ ಲಕ್ಷ್ಮ ರೆಡ್ಡಿ ಇಂದು (ಗುರುವಾರ) ರೈತರ ಅಭಿವೃದ್ಧಿಗಾಗಿ ಬರೋಬ್ಬರಿ ₹2 ಕೋಟಿಯ ಚೆಕ್ ಅನ್ನು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರಿಗೆ ನೀಡಿದರು.
ಬಾತುಲ ಲಕ್ಷ್ಮ ರೆಡ್ಡಿ ನೆಲ್ಕೊಂಡ ಜಿಲ್ಲೆಯ ಮಿರಿಯಾಲ್‌ಗುಡದ ಶಾಸಕರಾಗಿದ್ದು, ಒಂದು ಲಕ್ಷ ರೈತರಿಗೆ ಒಂದು ಚೀಲ ಉಚಿತ ಯೂರಿಯಾ ಗೊಬ್ಬರ ನೀಡಲು ಈ ಹಣವನ್ನು ಬಳಸಿಕೊಳ್ಳುವಂತೆ ಸಿಎಂ ರೇವಂತ್ ರೆಡ್ಡಿಯವರಿಗೆ ಮನವಿ ಮಾಡಿದ್ದಾರೆ.
ಶಾಸಕರು ಮಿರಿಯಾಲ್‌ಗುಡದಲ್ಲಿ ತಮ್ಮ ಮಗನ ಮದುವೆ ಕಾರ್ಯಕ್ರಮವನ್ನು ಆಯೋಜಿಸುವ ಪ್ಲಾನ್ ಮಾಡಿದ್ದರು. ಆದರೆ, ರೈತರನ್ನು ಬೆಂಬಲಿಸುವ ಉದ್ದೇಶದಿಂದ ಹಣವನ್ನು ದಾನ ಮಾಡಲು ಮುಂದಾದರು ಎಂದು ಶಾಸಕರು ತಮ್ಮ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದ್ಯ, ರೈತರ ಅಭಿವೃದ್ಧಿಯ ದೃಷ್ಟಿಯಿಂದ ಬರೋಬ್ಬರಿ ₹2 ಕೋಟಿ ದಾನ ಮಾಡಿರುವ ಶಾಸಕರು ಹಾಗೂ ಅವರ ಕುಟುಂಬ ಸದಸ್ಯರ ನಿರ್ಧಾರವನ್ನು ಸಿಎಂ ರೇವಂತ್ ರೆಡ್ಡಿ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.