ಹೈದರಾಬಾದ್:ತಾಯಿ ಪರೀಕ್ಷೆ ಬರೆಯುತ್ತಿದ್ದಾಗ, ಪೊಲೀಸರೊಬ್ಬರು ಅವರ 6 ತಿಂಗಳ ಮಗುವನ್ನು ನೋಡಿಕೊಳ್ಳುವ ಮೂಲಕ ಮಾತೃವಾತ್ಸಲ್ಯ ಮೆರೆದಿದ್ದಾರೆ.
ಮೆಹಬೂಬ್‌ನಗರದ ಬಾಲಕರ ಜೂನಿಯರ್ ಕಾಲೇಜಿನ ಕೇಂದ್ರದಲ್ಲಿ ಮಹಿಳೆಯೊಬ್ಬರು ಪೊಲೀಸ್ ಪ್ರಶಿಕ್ಷಣಾರ್ಥಿ ಪರೀಕ್ಷೆ ಬರೆಯಲು ತೆರಳಿದಾಗ, ಭದ್ರತೆಗೆ ನಿಯೋಜನೆಗೊಂಡಿದ್ದ ಹೆಡ್‌ಕಾನ್‌ಸ್ಟೆಬಲ್ ಮುಜೀಬ್ ಉರ್ ರೆಹಮಾನ್ ಎಂಬುವರು ಆ ಮಹಿಳೆಯ ಮಗುವನ್ನು ನೋಡಿಕೊಂಡಿದ್ದಾರೆ. ಇವರು ಮಗುವನ್ನು ಆಟವಾಡಿಸುತ್ತಿದ್ದಫೋಟೊವನ್ನು ಮೆಹಬೂಬ್‌ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೆಮಾ ರಾಜೇಶ್ವರಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.