
ಸಾಂದರ್ಭಿಕ ಚಿತ್ರ
ಹೈದರಾಬಾದ್: ಕರ್ನೂಲು ಬಸ್ ದುರಂತದ ನಂತರ ಎಚ್ಚೆತ್ತಿರುವ ತೆಲಂಗಾಣ ಸಾರಿಗೆ ಅಧಿಕಾರಿಗಳು ಟ್ರಾಫಿಕ್ ನಿಯಮ ಉಲ್ಲಂಘಿಸಿರುವ ಖಾಸಗಿ ಬಸ್‌ಗಳ ಮೇಲೆ ಶನಿವಾರ ಕ್ರಮ ಕೈಗೊಂಡಿದ್ದಾರೆ.
ಆಂಧ್ರಪ್ರದೇಶದ ಕರ್ನೂಲು ಬಳಿ ಸಂಭವಿಸಿದ ಖಾಸಗಿ ಬಸ್ ಬೆಂಕಿಗೆ ತುತ್ತಾಗಿತ್ತು. ದುರಂತದಲ್ಲಿ 20 ಜನರು ಮೃತಪಟ್ಟಿದ್ದರು.
ಶನಿವಾರ ಬೆಳಿಗ್ಗೆ ಹೈದರಾಬಾದ್‌ಗೆ ಆಗಮಿಸುವ ಖಾಸಗಿ ಬಸ್‌ಗಳನ್ನು 54 ಚೆಕ್ ಪೋಸ್ಟ್‌ಗಳ ಮೂಲಕ ತಪಾಸಣೆ ನಡೆಸಲಾಗಿದೆ. ಪ್ರತಿದಿನ 500ಕ್ಕೂ ಅಧಿಕ ಅಂತರರಾಜ್ಯ ಖಾಸಗಿ ಬಸ್‌ಗಳು ನಗರದ ಮೂಲಕ ಸಂಚರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರಿಗೆ ನಿಯಮಗಳ ಉಲ್ಲಂಘನೆ, ತೆರಿಗೆ ಪಾವತಿ, ಅಗ್ನಿಶಾಮಕ ವ್ಯವಸ್ಥೆಯಿಲ್ಲದ ಖಾಸಗಿ ಬಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಖಾಸಗಿ ಬಸ್‌ಗಳು ಸಂಚಾರ ಯೋಗ್ಯ ಸ್ಥಿತಿಯಲ್ಲಿ ಇರದಿದ್ದರೆ, ಸಂಚಾರಿ ನಿಯಮಗಳನ್ನು ಪಾಲಿಸದಿದ್ದರೆ, ಅತಿವೇಗವಾಗಿ ಸಂಚರಿಸಿದರೆ ಅದರ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತೆಲಂಗಾಣ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.