ಹೈದರಾಬಾದ್: ಭಾರಿ ಮಳೆಯಿಂದಾಗಿ ತೆಲಂಗಾಣದ ವಿವಿಧ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರದಟ್ಟಣೆ ಎದುರಾಗಿದೆ.
ಶುಕ್ರವಾರ ಬೆಳಿಗ್ಗೆ 8.30 ರಿಂದ 11 ಗಂಟೆಯವರೆಗೆ ನಾರಯಣಪೇಟೆ ಜಿಲ್ಲೆಯ ನರ್ವಾದಲ್ಲಿ 44.3 ಮಿ.ಮೀ.ಯಷ್ಟು ಮಳೆಯಾಗಿದೆ ಮತ್ತು ವಿಕಾರಾಬಾದ್ ಜಿಲ್ಲೆಯ ಮುಜಾಹಿದ್‌ಪುರದಲ್ಲಿ 40 ಮಿ.ಮೀ ಮಳೆಯಾಗಿದೆ ಎಂದು ‘ತೆಲಂಗಾಣ ಡೆವಲಪ್‌ಮೆಂಟ್ ಪ್ಲಾನಿಂಗ್ ಸೊಸೈಟಿ’ ತಿಳಿಸಿದೆ.
ಹೈದರಾಬಾದ್‌ನ ದಬೀರ್‌ಪುರದಲ್ಲಿ 28.5 ಮಿ.ಮೀ ಮಳೆಯಾಗಿದೆ. ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ಉದ್ಯೋಗಿಗಳು ಕಚೇರಿಗೆ ತೆರಳಲು ಕಷ್ಟಪಡುವಂತಾಗಿದೆ.
ಮಳೆಯಿಂದ ಉಂಟಾಗಿರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ನಿರ್ದೇಶನ ನೀಡಿದ್ದಾರೆ. ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ‘ವರ್ಕ್ ಫ್ರಮ್ ಹೋಂ’ ಆಯ್ಕೆ ನೀಡುವಂತೆ ಐಟಿ ಸಂಸ್ಥೆಗಳಿಗೆ ಸೈಬರಾಬಾದ್ ಪೊಲೀಸರು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.