ADVERTISEMENT

ತೆಲಂಗಾಣ: ಪೋಷಕರನ್ನು ಕಡೆಗಣಿಸುವ ಸರ್ಕಾರಿ ನೌಕರರ ಸಂಬಳ ಕಡಿತಕ್ಕೆ ಕಾನೂನು;ರೆಡ್ಡಿ

ಪಿಟಿಐ
Published 18 ಅಕ್ಟೋಬರ್ 2025, 14:18 IST
Last Updated 18 ಅಕ್ಟೋಬರ್ 2025, 14:18 IST
<div class="paragraphs"><p>ರೇವಂತ್ ರೆಡ್ಡಿ</p></div>

ರೇವಂತ್ ರೆಡ್ಡಿ

   

ಹೈದರಾಬಾದ್: ಸರ್ಕಾರಿ ನೌಕರರು ತಮ್ಮ ಪೋಷಕರನ್ನು ನಿರ್ಲಕ್ಷಿಸಿದರೆ, ಅವರ ಸಂಬಳದಲ್ಲಿ ಶೇ 10ರಿಂದ ಶೇ15ರಷ್ಟನ್ನು ಕಡಿತಗೊಳಿಸಿ ನಿರ್ಲಕ್ಷ್ಯಕ್ಕೊಳಗಾದ ಪೋಷಕರಿಗೆ ನೀಡುವ ಕಾನೂನನ್ನು ತೆಲಂಗಾಣ ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಶನಿವಾರ ಹೇಳಿದ್ದಾರೆ.

ಹೊಸದಾಗಿ ಆಯ್ಕೆಯಾದ ಗ್ರೂಪ್-II ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸುವ ಮೊದಲು ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೆಡ್ಡಿ, ಸಮಸ್ಯೆಗಳೊಂದಿಗೆ ಅವರನ್ನು ಸಂಪರ್ಕಿಸುವ ಜನರ ಜೊತೆ ಸಹಾನುಭೂತಿಯಿಂದ ವರ್ತಿಸುವಂತೆ ಕರೆ ನೀಡಿದರು.

ADVERTISEMENT

‘ನಾವು ಒಂದು ಕಾನೂನನ್ನು ತರುತ್ತಿದ್ದೇವೆ. ಸರ್ಕಾರಿ ನೌಕರರು ತಮ್ಮ ಪೋಷಕರನ್ನು ನಿರ್ಲಕ್ಷಿಸಿದರೆ, ಅವರ ಸಂಬಳದ ಶೇ 10ರಿಂದ 15 ರಷ್ಟನ್ನು ಕಡಿತಗೊಳಿಸಿ ಪೋಷಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಶಾಸನವನ್ನು ರಚಿಸುವವರು ನೀವೇ. ನೀವು ಮಾಸಿಕ ಸಂಬಳವನ್ನು ಪಡೆಯುವಂತೆಯೇ, ನಿಮ್ಮ ಪೋಷಕರು ಸಹ ಅದರಿಂದ ಮಾಸಿಕ ಆದಾಯವನ್ನು ಪಡೆಯುವುದನ್ನು ನಾವು ಖಚಿತಪಡಿಸುತ್ತೇವೆ’ಎಂದು ರೆಡ್ಡಿ ಹೇಳಿದರು.

ಶಾಸನವನ್ನು ರೂಪಿಸಲು ಅಧಿಕಾರಿಗಳ ಸಮಿತಿಯನ್ನು ರಚಿಸುವಂತೆ ರೆಡ್ಡಿ ಮುಖ್ಯ ಕಾರ್ಯದರ್ಶಿ ರಾಮಕೃಷ್ಣ ರಾವ್ ಅವರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.