ADVERTISEMENT

ಉಗ್ರರ ದಾಳಿ ಸಾಧ್ಯತೆ; ಯಾತ್ರಿಕರು ಕೂಡಲೇ ಮರಳುವಂತೆ ಜಮ್ಮು–ಕಾಶ್ಮೀರ ಸರ್ಕಾರ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 5:25 IST
Last Updated 7 ಆಗಸ್ಟ್ 2019, 5:25 IST
   

ಶ್ರೀನಗರ: ಪ್ರವಾಸಿಗರು ಹಾಗೂ ಅಮರನಾಥ ಯಾತ್ರಿಕರು ಕೂಡಲೇ ನಾಡಿನಿಂದ ಮರಳುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಶುಕ್ರವಾರ ಸಂದೇಶ ರವಾನಿಸಿದೆ.

ಭಯೋತ್ಪಾದನಾ ದಾಳಿಯ ಮೂಲಕಅಮರನಾಥ ಯಾತ್ರೆಗೆಉಗ್ರರಿಂದ ಅಪಾಯವಿರುವ ಕುರಿತು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವ ಬೆನ್ನಲೇ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳಿಗೆ ಮುಂದಾಗಿದೆ. ‘ಇಲ್ಲಿನ ಪ್ರವಾಸವನ್ನು ಮೊಟುಕುಗೊಳಿಸಿ ಹಾಗೂ ಕೂಡಲೇ ಹೊರಡಲು ಸೂಕ್ತ ಕ್ರಮವಹಿಸಿ’ ಎಂದು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭದ್ರತೆಗೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದ್ದಾರೆ.

(ಜಮ್ಮು–ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓವರ್‌ ಅಬ್ದುಲ್ಲ ಪ್ರತಿಕ್ರಿಯೆ)

ಅಮರನಾಥಯಾತ್ರೆ ಮಾರ್ಗದಲ್ಲಿ ಅಮೆರಿಕ ನಿರ್ಮಿತ ಸ್ನೈಪರ್‌(ಎಂ–24) ಸೇರಿದಂತೆ ಹಲವು ಸ್ಫೋಟಕಗಳನ್ನು ಸೇನೆ ವಶಪಡಿಸಿಕೊಂಡಿದೆ. ಭಯೋತ್ಪಾದನೆ ದಾಳಿ ನಡೆಸಲು ಪಾಕಿಸ್ತಾನ ಸೇನೆ ಉಗ್ರರಿಗೆ ನೆರವಾಗುತ್ತಿದೆ ಎಂದು ಭಾರತೀಯ ಸೇನೆ ಗಂಭೀರ ಆರೋಪ ಮಾಡಿದೆ.

ಜುಲೈ 1ರಿಂದ ಆರಂಭವಾದ ಅಮರನಾಥಯಾತ್ರೆ ಆಗಸ್ಟ್‌ 15ರ ವರೆಗೂ ಮುಂದುವರಿಯಬೇಕಿತ್ತು. ಆದರೆ, ಭದ್ರತಾ ಕಾರಣಗಳಿಂದಾಗಿ ಯಾತ್ರೆ ಮೊಟುಕುಗೊಳಿಸಲಾಗಿದೆ. ಕಾಶ್ಮೀರದಲ್ಲಿ ಹೆಚ್ಚುವರಿಯಾಗಿ ಭದ್ರತಾ ಪಡೆಗಳ ನಿಯೋಜನೆಯಾಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.