ADVERTISEMENT

ಉಗ್ರರಿಗೆ ಹಣಕಾಸು ನೆರವು: ಐವರ ಬಂಧನ

ಪಿಟಿಐ
Published 19 ಅಕ್ಟೋಬರ್ 2023, 19:52 IST
Last Updated 19 ಅಕ್ಟೋಬರ್ 2023, 19:52 IST
ಬಂಧನ (ಪ್ರಾತಿನಿಧಿಕ ಚಿತ್ರ)
ಬಂಧನ (ಪ್ರಾತಿನಿಧಿಕ ಚಿತ್ರ)   

ಚಂಡೀಗಢ: ಉಗ್ರರಿಗೆ ಹಣಕಾಸು ನೆರವು ಒದಗಿಸುತ್ತಿದ್ದ ಘಟಕವನ್ನು ಭೇದಿಸಿರುವ ಪಂಜಾಬ್‌ ಪೊಲೀಸರು, ಮಹಿಳೆ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ಅಮನ್‌ಪ್ರೀತ್ ವಾಲಿಯಾ, ರಮನ್‌ಬೀರ್‌ ಸಿಂಗ್, ಆರ್ಷಪ್ರೀತ್ ಸಿಂಗ್‌, ಹರ್ಮನ್‌ಪ್ರೀತ್‌ ಸಿಂಗ್‌ ಹಾಗೂ ಕಿರಣ್‌ದೀಪ್‌ ಕೌರ್‌ ಬಂಧಿತರು. ಎಲ್ಲರೂ ಅಮೃತಸರ ನಿವಾಸಿಗಳು ಎಂದು ಡಿಜಿಪಿ ಗೌರವ್‌ ಯಾದವ್ ತಿಳಿಸಿದ್ದಾರೆ.

ಪಾಕಿಸ್ತಾನ ಮೂಲದ ಹರ್ವಿಂದರ್ ಸಿಂಗ್‌ ರಿಂಡಾ ಬೆಂಬಲಿತ ಈ ಘಟಕವನ್ನು ಪರ್ಮಿಂದರ್ ಪಿಂಡಿ ಮುನ್ನಡೆಸುತ್ತಿದ್ದ. ಈತ, ರಿಂಡಾನ ಆಪ್ತ ಹಾಗೂ ಗ್ಯಾಂಗ್‌ಸ್ಟರ್ ಹರ್ಪ್ರೀತ್ ಸಿಂಗ್‌ನ ಸಂಪರ್ಕದಲ್ಲಿದ್ದ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.