ADVERTISEMENT

ಕೆಂಪುಕೋಟೆ ಬಳಿ ಬಾಂಬ್‌ ಸ್ಫೋಟ: ಮೂವರು ವೈದ್ಯರು, ಮೌಲ್ವಿ ಜೈಲಿಗೆ

ಪಿಟಿಐ
Published 12 ಡಿಸೆಂಬರ್ 2025, 15:41 IST
Last Updated 12 ಡಿಸೆಂಬರ್ 2025, 15:41 IST
.
.   

ನವದೆಹಲಿ: ಕೆಂಪುಕೋಟೆ ಬಳಿ ನ.10ರಂದು ನಡೆದಿದ್ದ ಕಾರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ವೈದ್ಯರು ಹಾಗೂ ಮೌಲ್ವಿಯೊಬ್ಬರನ್ನು ದೆಹಲಿ ನ್ಯಾಯಾಲಯವು 12 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.

ಸಂಚಿನ ಪ್ರಮುಖ ಆರೋಪಿ ಡಾ. ಬಿಲಾಲ್‌ ನಸೀರ್‌ ಮಲ್ಲಾ ಧ್ವನಿ ಮಾದರಿಯನ್ನು ದೃಢೀಕರಿಸಲು, ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಅಂಜು ಬಜಾಜ್ ಚಂದನಾ ಅವರ ಮುಂದೆ ಹಾಜರುಪಡಿಸಲಾಯಿತು.

ಎನ್‌ಐಎ ಕಸ್ಟಡಿ ಅವಧಿ ಮುಗಿಯುವ ಮುನ್ನ ಆರೋಪಿಗಳಾದ ಡಾ. ಮುಜಮ್ಮಿಲ್‌ ಗನೈ, ಡಾ. ಅದಿಲ್‌ ರಾಥರ್‌, ಡಾ. ಶಾಹೀನಾ ಸಯೀದ್ ಮತ್ತು ಮೌಲ್ವಿ ಇರ್ಫಾನ್‌ ಅಹಮದ್‌ನನ್ನು ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಲಾಯಿತು.

ADVERTISEMENT

ಪಟಿಯಾಲಾ ಹೌಸ್‌ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿತ್ತು. ಮಾಧ್ಯಮದವರಿಗೆ ನಿರ್ಬಂಧ ವಿಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.