ADVERTISEMENT

ನೂಪರ್‌ ಶರ್ಮಾ ಹತ್ಯೆಗೆ ಜೆಇಎಂ ಸಂಘಟನೆಯಿಂದ ನಿಯೋಜನೆಗೊಂಡಿದ್ದ ಉಗ್ರನ ಬಂಧನ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 14:44 IST
Last Updated 12 ಆಗಸ್ಟ್ 2022, 14:44 IST
   

ಲಖನೌ: ಪ್ರವಾದಿ ಮಹಮದ್ದರ ಅವಹೇಳನ ಆರೋಪದಲ್ಲಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್‌ ಶರ್ಮಾ ಅವರ ಹತ್ಯೆಗಾಗಿ ಜೈಶ್‌ ಎ ಮೊಹಮ್ಮದ್‌ಸಂಘಟನೆಯಿಂದ ನಿಯೋಜನೆಯಾಗಿದ್ದ ಉಗ್ರಗಾಮಿಯೊಬ್ಬನನ್ನು ಉತ್ತರ ಪ್ರದೇಶದ ಭಯೋತ್ಪಾದನ ನಿಗ್ರಹ ದಳ (ಎಟಿಎಸ್‌) ಬಂಧಿಸಿದೆ.

ಬಂಧಿತ ಉಗ್ರನನ್ನು ಮುಹಮ್ಮದ್‌ ನದೀಮ್‌ ಎಂದು ಗುರುತಿಸಲಾಗಿದೆ.

ADVERTISEMENT

ಈತ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳಾದ ಜೆಇಎಂ ಮತ್ತು ತೆಹ್ರೀಕ್– ಇ– ತಾಲಿಬಾನ್ ಪಾಕಿಸ್ತಾನ (ಟಿಟಿಪಿ)ಯೊಂದಿಗೆ ನೇರ ಸಂಪರ್ಕದಲ್ಲಿದ್ದ ಎಂದು ಎಟಿಎಸ್‌ ತಿಳಿಸಿದೆ.

ನೂಪುರ್‌ ಶರ್ಮಾ ಅವರನ್ನು ಹತ್ಯೆ ಮಾಡುವ ಕೆಲಸವನ್ನು ನದೀಮ್‌ಗೆ ವಹಿಸಲಾಗಿತ್ತು ಎಂದು ಎಟಿಎಸ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.