ADVERTISEMENT

ಸಿಆರ್‌ಪಿಎಫ್ ಯೋಧ, ಐದು ವರ್ಷದ ಮಗುವನ್ನು ಕೊಂದಿದ್ದ ಇಬ್ಬರು ಉಗ್ರರ ಎನ್‌ಕೌಂಟರ್‌

ಏಜೆನ್ಸೀಸ್
Published 30 ಜೂನ್ 2020, 4:36 IST
Last Updated 30 ಜೂನ್ 2020, 4:36 IST
ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್‌ಬಾಲ್ ಸಿಂಗ್
ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್‌ಬಾಲ್ ಸಿಂಗ್    

ಶ್ರೀನಗರ: ಮೂರು ದಿನಗಳ ಹಿಂದಷ್ಟೇ ಬಿಜ್‌ಬೆಹರ್ ಸಮೀಪ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಯೋಧ ಮತ್ತು ಐದು ವರ್ಷದ ಮಗುವನ್ನು ಹತ್ಯೆ ಮಾಡಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್‌ಬಾಲ್ ಸಿಂಗ್ ಮಂಗಳವಾರ ತಿಳಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶದ ಅನಂತ್‌ನಾಗ್ ಜಿಲ್ಲೆಯ ವಾಘಾಮ ಬಿಜ್‌ಬೆಹರ್‌ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರರು ಬಲಿಯಾಗಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

ಜೂನ್ 26ರಂದು ಅನಂತ್‌ನಾಗ್ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಯೋಧ ಶ್ಯಾಮಲ್ ಕುಮಾರ್ ದೆ ಮತ್ತು ಮಗುವನ್ನು ಹತ್ಯೆ ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.