ADVERTISEMENT

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ; ಸ್ಪರ್ಧಿಸಲು ತರೂರ್‌ ಅರ್ಹರು: ಕೆಪಿಸಿಸಿ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2022, 9:08 IST
Last Updated 31 ಆಗಸ್ಟ್ 2022, 9:08 IST
ಶಶಿ ತರೂರ್‌
ಶಶಿ ತರೂರ್‌   

ತಿರುವನಂತಪುರ: ಕಾಂಗ್ರೆಸ್‌ ಪ್ರಜಾಪ್ರಭುತ್ವದ ಪಕ್ಷ. ಲೋಕಸಭಾ ಸದಸ್ಯ ಶಶಿ ತರೂರ್‌ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರು ಎಂದು ಕೇರಳ ಕಾಂಗ್ರೆಸ್ ಘಟಕ (ಕೆಪಿಸಿಸಿ)ದ ಅಧ್ಯಕ್ಷಕೆ ಸುಧಾಕರನ್‌ ಹೇಳಿದ್ದಾರೆ.

ಶಶಿ ತರೂರ್‌ ಅವರು ಸ್ಪರ್ಧಿಸಲು ಮುಂದಾದರೆ ಅವರನ್ನು ದೂರುವ ಅವಶ್ಯಕತೆ ಇಲ್ಲ. ಕಾಂಗ್ರೆಸ್‌ ಒಂದು ಪ್ರಜಾಪ್ರಭುತ್ವ ಹೊಂದಿರುವ ಪಕ್ಷವಾಗಿದೆ. ಸದಸ್ಯರಿಗೆ ಉನ್ನತ ಹುದ್ದೆ ಸ್ಪರ್ಧಿಸುವ ಹಕ್ಕು ಇದೆ ಎಂದು ಒತ್ತಿ ಹೇಳಿದ್ದಾರೆ.

'ಇದರಲ್ಲಿ ಅಚ್ಚರಿ ಎಂಬುವಂತದ್ದು ಏನಿದೆ? ಶಶಿ ತರೂರ್‌ ಅವರು ಅರ್ಹ ಅಭ್ಯರ್ಥಿ ಅಲ್ಲವೇ? ಪ್ರಜಾಪ್ರಭುತ್ವ ಪಕ್ಷದಲ್ಲಿ ಎಲ್ಲ ಸದಸ್ಯರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇದೆ. ನಾನು ಸ್ಪರ್ಧಿಸಲು ಬಯಸಿದರೆ ನನಗೂ ಸ್ಪರ್ಧಿಸುವ ಹಕ್ಕಿದೆ. ಅದನ್ನು ಪಕ್ಷವು ಸ್ವಾಗತಿಸುತ್ತದೆ. ನನಗೆ ಮತ ಸಿಕ್ಕಿದರೆ ನಾನು ಗೆಲ್ಲುತ್ತೇನೆ' ಎಂದು ಸುಧಾಕರನ್‌ ಬುಧವಾರ ಸುದ್ದಿಗಾರರಿಗೆ ವಿವರಿಸಿದ್ದಾರೆ.

ADVERTISEMENT

ಸಂಸದ ಶಶಿ ತರೂರ್‌ ಅವರು, ‘ಪಕ್ಷಕ್ಕೆ ಚುನಾವಣೆಯು ಒಳ್ಳೆಯ ಬೆಳವಣಿಗೆ’ ಎಂದು ಹೇಳುವ ಮೂಲಕ ತಮ್ಮ ಸ್ಪರ್ಧೆಯ ಕುರಿತ ಬಯಕೆಯನ್ನು ತೋರ್ಪಡಿಸಿದ್ದರು. ಮಲಯಾಳ ಪತ್ರಿಕೆ ‘ಮಾತೃಭೂಮಿ’ಗೆ ಬರೆದ ಲೇಖನವೊಂದರಲ್ಲಿ ಅವರು, ‘ಮುಕ್ತ ಮತ್ತು ನ್ಯಾಯಸಮ್ಮತ’ವಾಗಿ ಅಧ್ಯಕ್ಷ ಚುನಾವಣೆ ನಡೆಯಬೇಕು. ಅಧ್ಯಕ್ಷ ಸ್ಥಾನದ ಚುನಾವಣೆ ಜೊತೆಯಲ್ಲಿ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿಗೂ ಚುನಾವಣೆ ನಡೆದಿದ್ದರೆ ಉತ್ತಮವಾಗಿರುತ್ತಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.