ADVERTISEMENT

‘ದಿ ಬಂಗಾಲ್‌ ಫೈಲ್ಸ್‌’ ಬಿಡುಗಡೆ ತಡೆದರೆ ಕಾನೂನು ಹೋರಾಟ: ವಿವೇಕ್‌ ಅಗ್ನಿಹೋತ್ರಿ

ಪಿಟಿಐ
Published 18 ಆಗಸ್ಟ್ 2025, 16:05 IST
Last Updated 18 ಆಗಸ್ಟ್ 2025, 16:05 IST
ವಿವೇಕ್‌ ಅಗ್ನಿಹೋತ್ರಿ
ವಿವೇಕ್‌ ಅಗ್ನಿಹೋತ್ರಿ   

ನವದೆಹಲಿ: ‘ಪಶ್ಚಿಮ ಬಂಗಾಳದಲ್ಲಿ ನನ್ನ ‘ದಿ ಬಂಗಾಲ್‌ ಫೈಲ್ಸ್‌’ ಸಿನಿಮಾದ ಬಿಡುಗಡೆಗೆ ತಡೆಯೊಡ್ಡಿದರೆ ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇನೆ’ ಎಂದು ನಿರ್ದೇಶಕ ವಿವೇಕ್‌ ರಂಜನ್‌ ಅಗ್ನಿಹೋತ್ರಿ ಸೋಮವಾರ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಕೋಲ್ಕತ್ತದಲ್ಲಿ ಶನಿವಾರ ಸಿನಿಮಾದ ಟ್ರೇಲರ್‌ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಆದರೆ, ಮಲ್ಟಿಪ್ಲೆಕ್ಸ್‌ನವರು ಕಾರ್ಯಕ್ರಮವನ್ನು ರದ್ದು ಮಾಡಿದರು. ಬಳಿಕ ಹೋಟೆಲ್‌ವೊಂದರಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಅಲ್ಲಿನ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಯಿತು’ ಎಂದು ಆರೋಪಿಸಿದರು.

ಸೆಪ್ಟೆಂಬರ್‌ 5ಕ್ಕೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 1946ರ ಆಗಸ್ಟ್‌ 16ರಂದು ನಡೆದ ಕೋಲ್ಕತ್ತ ದಂಗೆಯ ಕುರಿತು ‘ದಿ ಬೆಂಗಾಲ್‌ ಫೈಲ್ಸ್‌’ ಸಿನಿಮಾದ ಕಥಾವಸ್ತುವಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.