ADVERTISEMENT

ಲಕ್ಷದ್ವೀಪದಲ್ಲಿ ಸಿಲುಕಿದ್ದ ಹಡಗನ್ನು ರಕ್ಷಿಸಿದ ಭಾರತೀಯ ಕರಾವಳಿ ಕಾವಲು ಪಡೆ

ಪಿಟಿಐ
Published 27 ಜನವರಿ 2024, 13:30 IST
Last Updated 27 ಜನವರಿ 2024, 13:30 IST
<div class="paragraphs"><p>ಚಿತ್ರ ಕೃಪೆ: ಇಂಡಿಯಾ ಕೋಸ್ಟ್ ಗಾರ್ಡ್</p></div>
   

ಚಿತ್ರ ಕೃಪೆ: ಇಂಡಿಯಾ ಕೋಸ್ಟ್ ಗಾರ್ಡ್

ಕೊಚ್ಚಿ: ಎಂಜಿನ್‌ ದೋಷದಿಂದಾಗಿ ಲಕ್ಷದ್ವೀಪದಲ್ಲಿ ಸಿಲುಕಿದ್ದ ಮೀನುಗಾರಿಕಾ ಹಡಗನ್ನು ಭಾರತೀಯ ಕರಾವಳಿ ಕಾವಲು ಪಡೆ ಸುರಕ್ಷಿತವಾಗಿ ವಾಪಸ್‌ ಎಳೆದೊಯ್ಯಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಜನವರಿ 25ರಂದು ಲಕ್ಷದ್ವೀಪದದಲ್ಲಿ ಎಂಜಿನ್‌ ದೋಷದಿಂದಾಗಿ ಸಿಲುಕಿದ್ದ ‘ಅರುಲ್ ಮಾತಾ‘ ಎಂಬ ಮೀನುಗಾರಿಕಾ ಹಡಗನ್ನು ಮಿನಿಕಾಯ್ ದ್ವೀಪಕ್ಕೆ ಎಳೆದೊಯ್ಯಲಾಗಿದೆ ಎಂದು ‘ಇಂಡಿಯಾ ಕೋಸ್ಟ್ ಗಾರ್ಡ್‘ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ADVERTISEMENT

ಮಿನಿಕಾಯ್ ದ್ವೀಪದಿಂದ ನೈಋತ್ಯಕ್ಕೆ ಸುಮಾರು 92 ಕಿ.ಮೀ ದೂರದಲ್ಲಿ ಮೀನುಗಾರಿಕಾ ಹಡಗು ಸಿಕ್ಕಿಬಿದ್ದಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.