ADVERTISEMENT

‘ಅರ್ಜುನ್’ ಪ್ರಶಸ್ತಿ ಪುರಸ್ಕೃತ ಪೊಲೀಸ್‌ ಅಧಿಕಾರಿ ಹತ್ಯೆ

48 ಗಂಟೆಗಳಲ್ಲಿ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 23:22 IST
Last Updated 4 ಜನವರಿ 2024, 23:22 IST
<div class="paragraphs"><p>ಹತ್ಯೆ (ಪ್ರಾತಿನಿಧಿಕ ಚಿತ್ರ)&nbsp;</p></div>

ಹತ್ಯೆ (ಪ್ರಾತಿನಿಧಿಕ ಚಿತ್ರ) 

   

ನವದೆಹಲಿ: ಪಂಜಾಬ್‌ನ ಜಲಂಧರ್ ನಗರದಲ್ಲಿ ನಡೆದಿದ್ದ ಪೊಲೀಸ್‌ ಅಧಿಕಾರಿಯೊಬ್ಬರ ಹತ್ಯೆ ಪ್ರಕರಣವನ್ನು ಆಧುನಿಕ ತಾಂತ್ರಿಕತೆ ಬಳಸಿ ತನಿಖೆ ಮೂಲಕ ಭೇದಿಸಲಾಗಿದ್ದು, 48 ಗಂಟೆಗಳಲ್ಲಿಯೇ ಆರೋಪಿಯನ್ನು ಬಂಧಿಸಲಾಗಿದೆ.

ಪೊಲೀಸ್‌ ಅಧಿಕಾರಿ ದಲ್ಬೀರ್‌ ಸಿಂಗ್‌ ಡಿಯೋಲ್ ಹತ್ಯೆಯಾದ ಅಧಿಕಾರಿ. ವೇಟ್‌ ಲಿಫ್ಟರ್‌ ಆಗಿದ್ದ ಅವರು ಪ್ರತಿಷ್ಠಿತ ಅರ್ಜುನ್‌ ಪ್ರಶಸ್ತಿ ಪುರಸ್ಕೃತರೂ ಆಗಿದ್ದರು.

ADVERTISEMENT

ಕಾಲುವೆಯೊಂದರ ಬಳಿ ಬುಧವಾರ ಅವರ ಶವ ಪತ್ತೆಯಾಗಿತ್ತು. ಅವರ ತಲೆಯಲ್ಲಿ ಗುಂಡಿನಿಂದಾದ ಗಾಯ ಇತ್ತು.

ಅದೇ ಮಾರ್ಗವಾಗಿ ಹೊರಟಿದ್ದ ಮತ್ತೊಬ್ಬ ಪೊಲೀಸ್‌ ಅಧಿಕಾರಿ ಜುಗಲ್‌ ಕಿಶೋರ್‌ ಅವರು ದಲ್ಬೀರ್‌ ಸಿಂಗ್‌ ಮೃತದೇಹವನ್ನು ಗಮನಿಸಿ, ತಮ್ಮ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ತನಿಖೆಯನ್ನು ಆರಂಭಿಸಲಾಯಿತು ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಸಿ.ಸಿ.ಟಿ.ವಿಯಲ್ಲಿ ದಾಖಲಾಗಿದ್ದ ದೃಶ್ಯಗಳನ್ನು ಪರಿಶೀಲಿಸಿದಾಗ, ಆಟೊವೊಂದರಲ್ಲಿ ದಲ್ಬೀರ್‌ ಸಿಂಗ್‌ ತೆರಳಿದ್ದು ಗೊತ್ತಾಗಿದೆ. ನಂತರ ಆಟೊ ನಂಬರ್‌ ಹಾಗೂ ಮೊಬೈಲ್‌ ಸಿಗ್ನಲ್‌ಗಳ ಕೂಲಂಕಷ ಪರಿಶೀಲನೆ ನಂತರ, ಆಟೊ ಚಾಲಕ ವಿಜಯಕುಮಾರ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಪೊಲೀಸ್‌ ಅಧಿಕಾರಿ ದಲ್ಬೀರ್‌ ಸಿಂಗ್ ಅವರನ್ನು ಅವರ ಗ್ರಾಮಕ್ಕೆ ಬಿಡಲು ಆಟೊ ಚಾಲಕ ನಿರಾಕರಿಸಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ, ದಲ್ಬೀರ್‌ ಸಿಂಗ್‌ ಬಳಿ ಇದ್ದ ರಿವಾಲ್ವರ್‌ ಕಿತ್ತುಕೊಂಡ ವಿಜಯಕುಮಾರ್‌, ಅವರ ತಲೆಗೆ ಗುಂಡು ಹೊಡೆದಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.