ಪ್ರಾತಿನಿಧಿಕ ಚಿತ್ರ
ಶಾಜಾಪುರ: ಪ್ರೇಮಿಗಳ ದಿನದಂದು ಪ್ರಿಯಕರನ ಜತೆಗೂಡಿ ಮಹಿಳೆಯೊಬ್ಬರು ತನ್ನ ಪತಿಯನ್ನೇ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಶಾಜಾಪುರದಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಲ್ಲಿನ ಮೋಹನ್ ಬಡೋಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಫರತ್ ಖೇಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಆರೋಪಿ ಮಮತಾ, ತನ್ನ ಪತ್ನಿಯನ್ನು ಕೊಲ್ಲಲು ಯೋಜನೆಯನ್ನು ಸಿದ್ಧಪಡಿಸಿ, ಪ್ರಿಯಕರನ ಜತೆಗೆ ಆಕೆಯ ಸ್ನೇಹಿತನ ಸಹಾಯವನ್ನೂ ಪಡೆದುಕೊಂಡಿದ್ದಾರೆ.
ಸ್ನೇಹಿತ ಮತ್ತು ಪ್ರಿಯಕರನನ್ನು ಮನೆಯೊಳಗೆ ಪ್ರವೇಶಿಸಲು ಮಮತಾ ಅನುವು ಮಾಡಿಕೊಟ್ಟಿದ್ದಾರೆ. ಒಳಗೆ ಬಂದ ಆರೋಪಿಗಳು ಆಕೆಯ ಪತಿಯ ಕತ್ತು ಸೀಳಿ ಕೊಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕೃತ್ಯದಲ್ಲಿ ಆರೋಪಿಗಳು ಕೆಲವು ಸಾಕ್ಷ್ಯಗಳನ್ನು ಬಿಟ್ಟಿದ್ದರು. ಇದೇ ಸುಳಿವನ್ನು ಬೆನ್ನೆತ್ತಿದ ವಿಧಿ ವಿಜ್ಞಾನ ತಂಡದವರು ಆರೋಪಿಗಳ ಪತ್ತೆಗೆ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಮಹಿಳೆ, ಪ್ರಿಯಕರ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.