ಹೋಳಿ
ಹೈದರಾಬಾದ್: ಹೋಳಿ ಆಚರಣೆಗಳಿಗೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು ಹಲವು ನಿರ್ಬಂಧಗಳನ್ನು ವಿಧಿಸಿದ್ದಾರೆ ಎಂದು ಬಿಜೆಪಿ ಶಾಸಕ ರಾಜಾ ಸಿಂಗ್ ಆರೋಪಿಸಿದ್ದಾರೆ.
ಹೋಳಿ ಆಚರಣೆಗಳಿಗೆ ಸಂಬಂಧಿಸಿದಂತೆ ಪೊಲೀಸರ ಅಧಿಸೂಚನೆಯನ್ನು ಖಂಡಿಸಿದ ಶಾಸಕ ರಾಜಾ ಸಿಂಗ್ ಇದು ತುಘ್ಲಕ್ ಆದೇಶ ಎಂದು ಕಿಡಿಕಾರಿದ್ದಾರೆ.
ರಸ್ತೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗಳಲ್ಲಿ ಸೇರುವುದು, ದ್ವಿಚಕ್ರ ಮತ್ತು ಇತರ ವಾಹನಗಳಲ್ಲಿ ಗುಂಪುಗೂಡುವುದನ್ನು ಪೊಲೀಸರು ನಿಷೇಧಿಸಿದ್ದಾರೆ.
ಇಷ್ಟವಿಲ್ಲದ ವ್ಯಕ್ತಿಗಳ ಮೇಲೆ ಬಣ್ಣ ಅಥವಾ ನೀರು ಎರಚುವುದನ್ನು ನಿಷೇಧಿಸಲಾಗಿದೆ. ಶಾಂತಿ ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸುವ ಅಥವಾ ಸಾರ್ವಜನಿಕರಿಗೆ ಅನಾನುಕೂಲ ಅಥವಾ ಅಪಾಯವನ್ನು ಉಂಟುಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.