ADVERTISEMENT

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಇಲ್ಲ: ಎಸ್‌ಪಿ ಸಂಸದ

ಪಿಟಿಐ
Published 22 ಮೇ 2022, 11:31 IST
Last Updated 22 ಮೇ 2022, 11:31 IST
ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿ 
ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿ    

ಲಖನೌ(ಪಿಟಿಐ): ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಯಾವುದೇ ಶಿವಲಿಂಗ ಇಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರಹಮಾನ್ ಬರ್ಕ್ ಅವರು ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆಗಾಗಿ ಜನರ ಭಾವನೆಗಳನ್ನು ಕೆರಳಿಸಲುಮಸೀದಿಯಲ್ಲಿ ಲಿಂಗ ಪತ್ತೆಯಾಗಿದೆ ಎಂಬ ಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ಭಾನುವಾರ ಸಮಾಜವಾದಿ ಪಕ್ಷದ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಇಲ್ಲ ಎಂಬುದು ಇತಿಹಾಸವನ್ನು ಓದಿದರೆ ತಿಳಿಯುತ್ತದೆ. 2024ರ ಚುನಾವಣೆಗಳಿಗಾಗಿ ಈ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ' ಎಂದು ಹೇಳಿದರು.

ಅಲ್ಲದೆ, ರಾಮಮಂದಿರ ನಿರ್ಮಾಣವಾಗುತ್ತಿರುವ ಹೊರತಾಗಿಯೂ ಅಯೋಧ್ಯೆಯಲ್ಲಿ ಮಸೀದಿ ಇದೆ ಎಂದು ಈಗಲೂ ಹೇಳುತ್ತೇನೆ. ಇದು ಅಧಿಕಾರದ ಪ್ರತಿಬಿಂಬ. ನಮ್ಮನ್ನು ಗುರಿಯಾಗಿಸಿಕೊಳ್ಳಲಾಗಿದ್ದು, ಮಸೀದಿಗಳ ಮೇಲೆ ದಾಳಿ ನಡೆಯುತ್ತಿದೆ. ಈ ರೀತಿಯಾಗಿ ಸರ್ಕಾರ ನಡೆಸಬಾರದು. ಇಲ್ಲಿ ಬುಲ್ಡೋಜರ್ ಆಡಳಿತವಿದೆಯೇ ಹೊರತು, ಕಾನೂನು ಇಲ್ಲ ಎಂದು ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.