ADVERTISEMENT

ದೀಪಾವಳಿಗೂ ಮುನ್ನವೇ ದೆಹಲಿಯನ್ನು ಆವರಿಸಿದ ದಟ್ಟ ಹೊಗೆ–ಮಂಜು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2018, 5:19 IST
Last Updated 5 ನವೆಂಬರ್ 2018, 5:19 IST
   

ನವದೆಹಲಿ: ದೀಪಾವಳಿಗೂ ಮುನ್ನವೇ ದೆಹಲಿಯಲ್ಲಿ ಹೊಗೆ ಮಿಶ್ರಿತ ದಟ್ಟ ಮಂಜು ಆವರಿಸಿದ್ದು, ವಾಯು ಗುಣಮಟ್ಟ ಅಪಾಯಕಾರಿ ಮಟ್ಟವನ್ನು ಮೀರಿದೆ. ಇದು ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಕಾರಣವಾಗಲಿದೆ ಎನ್ನಲಾಗಿದೆ.

ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿ ಪ್ರಕಾರ, ಸೋಮವಾರ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ)ಒಂದು ಘನ ಮೀಟರ್‌ ಗಾಳಿಯಲ್ಲಿ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಪ್ರಮಾಣ 644 ಅಥವಾ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಅಪಾಯಕಾರಿ ಮಟ್ಟಕ್ಕಿಂತಲೂ 20 ಪಟ್ಟು ಹೆಚ್ಚಿದೆ. ಪಿಎಂ 2.5 ಮಾಲಿನ್ಯಕಾರಕ ಕಣಗಳು ನೇರವಾಗಿ ಶ್ವಾಸಕೋಶವನ್ನು ತಲುಪಿ ಉಸಿರಾಟದ ಸಮಸ್ಯೆಗಳನ್ನು ತಂದೊಡುತ್ತದೆ.

ನವೆಂಬರ್‌ 10ರ ವರೆಗೂ ಮಾಲಿನ್ಯಕಾರಕ ವಾಹನಗಳ ತಪಾಸಣೆ ನಡೆಸುವಂತೆ ಸಂಚಾರಿ ಪೊಲೀಸರಿಗೆ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ. ಭೂಮಿ ತೋಡುವುದು ಸೇರಿದಂತೆ ಧೂಳು ಇಮ್ಮಡಿಸುವ ಕಟ್ಟಡ ನಿರ್ಮಾಣ ಕಾರ್ಯಗಳನ್ನು ನಡೆಸುವಂತಿಲ್ಲ; ಕಲ್ಲು ಪುಡಿ ಮಾಡುವ ಯಂತ್ರಗಳ ಬಳಕೆಗೂ ನಿಷೇಧ ಹೇರಲಾಗಿದೆ.

ADVERTISEMENT

ಹೆಚ್ಚಿದ ಗಾಳಿಯ ವೇಗ ಹಾಗೂ ಮಾಲಿನ್ಯ ನಿಯಂತ್ರಣ ಕ್ರಮಗಳ ಪರಿಣಾಮ ಭಾನುವಾರ ಗಾಳಿಯ ಗುಣಮಟ್ಟ ಉತ್ತಮಗೊಂಡಿತ್ತು.

ದೆಹಲಿಯ ರಾಜಪಥ್‌ ಮಾರ್ಗದಲ್ಲಿ ಆವರಿಸಿರುವ ಹೊಂಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.