ADVERTISEMENT

ಈರುಳ್ಳಿ ಕದ್ದು ಹಣ ಬಿಟ್ಟು ಹೋದ ಕಳ್ಳರು

ಏಜೆನ್ಸೀಸ್
Published 28 ನವೆಂಬರ್ 2019, 1:15 IST
Last Updated 28 ನವೆಂಬರ್ 2019, 1:15 IST
ಹೈದರಾಬಾದ್‌ನಲ್ಲಿ ಈರುಳ್ಳಿ ಧಾರಣೆ ಪ್ರತಿ ಕೆ.ಜಿ.ಗೆ ₹ 100 ಮುಟ್ಟಿದೆ
ಹೈದರಾಬಾದ್‌ನಲ್ಲಿ ಈರುಳ್ಳಿ ಧಾರಣೆ ಪ್ರತಿ ಕೆ.ಜಿ.ಗೆ ₹ 100 ಮುಟ್ಟಿದೆ   

ಕೊಲ್ಕತ್ತಾ: ತರಕಾರಿ ಮಾರಾಟ ಮಳಿಗೆಗೆನುಗ್ಗಿದ ಕಳ್ಳರು ಹಣವನ್ನು ಅಲ್ಲಿಯೇ ಬಿಟ್ಟು, ಈರುಳ್ಳಿ ಹೊತ್ತೊಯ್ದ ಘಟನೆರಾಜ್ಯದ ಪೂರ್ವ ಮಿಡ್ನಾಪುರ್ ಜಿಲ್ಲೆಯ ಸುತಹತ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಸುತಹತ ನಗರದ ತರಕಾರಿ ವ್ಯಾಪಾರಿ ಅಕ್ಷಯ್ ದಾಸ್ ಮಂಗಳವಾರ ಮುಂಜಾನೆಆಂಗಡಿ ಬಾಗಿಲು ತೆರೆದಾಗ ವಸ್ತುಗಳೆಲ್ಲಾ ಚಿಲ್ಲಾಪಿಲ್ಲಿಯಾಗಿದ್ದುದು ಕಂಡು ಗಾಬರಿಯಾದರು.

ಸೋಮವಾರ ರಾತ್ರಿ ಅಂಗಡಿಗೆ ನುಗ್ಗಿದ ಕಳ್ಳರು ಏನೆಲ್ಲಾ ಕದ್ದೊಯ್ದಿರಬಹುದು ಎಂದುಕೊಳ್ಳುತ್ತಾ ಮೊದಲು ಗಲ್ಲಾಪೆಟ್ಟಿಗೆ ನೋಡಿದರು. ಆದರೆ ಅಲ್ಲಿ ಹಣ ಹಾಗೆಯೇ ಇತ್ತು. ಆದರೆ ಒಂದಿಷ್ಟು ಈರುಳ್ಳಿ ಚೀಲಗಳು ನಾಪತ್ತೆಯಾಗಿದ್ದವು.

ADVERTISEMENT

₹ 50 ಸಾವಿರ ಮೌಲ್ಯದ ಈರುಳ್ಳಿಯ ಜೊತೆಗೆಬೆಳ್ಳುಳ್ಳಿ ಮತ್ತು ಶುಂಠಿಯನ್ನೂ ಕಳ್ಳರು ಹೊತ್ತೊಯ್ದಿದ್ದಾರೆ. ಆದರೆ ಹಣದ ಪೆಟ್ಟಿಗೆಯಿಂದ ಒಂದೇ ಒಂದು ರೂಪಾಯಿಯನ್ನೂ ಕದ್ದಿಲ್ಲ.ಪಶ್ಚಿಮ ಬಂಗಾಳದಲ್ಲಿ ಪ್ರತಿ ಕೆ.ಜಿ. ಈರುಳ್ಳಿ ಬೆಲೆ ₹ 100 ದಾಟಿದೆ. ಕಳ್ಳರಿಗೂ ಈಗ ಹಣಕ್ಕಿಂತಲೂ ಈರುಳ್ಳಿಯೇ ಅಮೂಲ್ಯ ಎಂದುಅನ್ನಿಸುತ್ತಿರಬಹುದೆಂದು ಅಕ್ಷಯ್‌ ದಾಸ್ ನಕ್ಕು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.