ADVERTISEMENT

ಹೋಳಿ ಬಣ್ಣಗಳ ಸಮಸ್ಯೆಯಿದ್ದರೆ ದೇಶ ಬಿಟ್ಟು ತೊಲಗಿ: ಉ.ಪ್ರದೇಶ ಸಚಿವ ನಿಷಾದ್

ಪಿಟಿಐ
Published 14 ಮಾರ್ಚ್ 2025, 4:42 IST
Last Updated 14 ಮಾರ್ಚ್ 2025, 4:42 IST
<div class="paragraphs"><p>ಸಂಜಯ್ ನಿಷಾದ್</p></div>

ಸಂಜಯ್ ನಿಷಾದ್

   

(ಚಿತ್ರ ಕೃಪೆ: x/@mahamana4u)

ಗೋರಖಪುರ: 'ಯಾರಿಗಾದರೂ ಹೋಳಿ ಹಬ್ಬದ ಬಣ್ಣಗಳಿಂದ ಸಮಸ್ಯೆಯಿದ್ದರೆ ಅಂತವರು ದೇಶ ಬಿಟ್ಟು ತೊಲಗಬೇಕು' ಎಂದು ಉತ್ತರಪ್ರದೇಶದ ಸಚಿವ, ನಿಷಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಷಾದ್ ಹೇಳಿಕೆ ನೀಡಿದ್ದಾರೆ.

ADVERTISEMENT

ಗುರುವಾರ ಗೋರಖಪುರದಲ್ಲಿ 'ಹೋಳಿ ಮಿಲನ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಸಮಾಜದಲ್ಲಿ ವಿಭಜನೆ ಸೃಷ್ಟಿಸಲು ವಿರೋಧ ಪಕ್ಷದ ಕೆಲವು ನಾಯಕರು ಯತ್ನಿಸುತ್ತಿದ್ದಾರೆ. ಹೋಳಿ ಆಚರಣೆಯಲ್ಲಿ ಧರ್ಮವನ್ನು ಜೋಡಿಸುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.

'ಶುಕ್ರವಾರದ ಪ್ರಾರ್ಥನೆಯ ವೇಳೆ ಜನರು ಪರಸ್ಪರ ತಬ್ಬಿಕೊಳ್ಳುತ್ತಾರೆ. ಹೋಳಿ ಆಚರಣೆಯಲ್ಲೂ ಅದೇ ರೀತಿ ನಡೆಯುತ್ತದೆ. ಎರಡೂ (ಹೋಳಿ ಹಾಗೂ ರಂಜಾನ್) ಒಗ್ಗಟ್ಟಿನ ಹಬ್ಬಗಳಾಗಿವೆ. ಆದರೆ ಕೆಲವು ರಾಜಕಾರಣಿಗಳು ಏಕತೆಯನ್ನು ಬಯಸುವುದಿಲ್ಲ. ಒಂದು ನಿರ್ದಿಷ್ಟ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರಿಗೆ ಬಣ್ಣಗಳ ಸಮಸ್ಯೆ ಇದ್ದರೆ, ಮನೆಯೊಳಗೆ ಇರಬಾರದು. ದೇಶವನ್ನೇ ತೊರೆಯಬೇಕು' ಎಂದು ಅವರು ಹೇಳಿದ್ದಾರೆ.

'ಒಂದು ನಿರ್ದಿಷ್ಟ ಸಮುದಾಯವು ಬಟ್ಟೆ, ಮನೆ ಅಲಂಕಾರ ಹಾಗೂ ವ್ಯವಹಾರಗಳಲ್ಲಿ ವ್ಯಾಪಕವಾಗಿ ಬಣ್ಣವನ್ನು ಬಳಕೆ ಮಾಡುತ್ತಿದೆ. ನಿಜವಾಗಿಯೂ ಬಣ್ಣಗಳಿಂದ ಅವರಿಗೆ ಸಮಸ್ಯೆಯಿದ್ದರೆ ಇದು ಹೇಗೆ ಸಾಧ್ಯ' ಎಂದು ಉತ್ತರ ಪ್ರದೇಶದ ಮೀನುಗಾರಿಕಾ ಸಚಿವರೂ ಆಗಿರುವ ನಿಷಾದ್ ಪ್ರಶ್ನಿಸಿದ್ದಾರೆ.

'ಬಣ್ಣಗಳನ್ನು ಹಚ್ಚುವುದರಿಂದ ನಂಬಿಕೆಗೆ ಹಾನಿಯಾಗುತ್ತದೆ ಎಂದು ಕೆಲವು ಹೇಳುತ್ತಾರೆ. ಆದರೆ ವರ್ಣರಂಜಿತ ಬಟ್ಟೆಗಳನ್ನು ಹೇಗೆ ಧರಿಸುತ್ತಾರೆ? ಹೆಚ್ಚಿನ ಸಂಖ್ಯೆಯ ಬಣ್ಣಗಳ ವ್ಯಾಪಾರಿಗಳು ಈ ಸಮುದಾಯಕ್ಕೆ ಸೇರಿದವರು' ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.