ADVERTISEMENT

ಮುಂಬೈ ದಾಳಿ: ಪ್ರಮುಖ ರೂವಾರಿಯ ಸುಳಿವು ನೀಡಿದವರಿಗೆ ₹ 35 ಕೋಟಿ ಬಹುಮಾನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2018, 6:12 IST
Last Updated 26 ನವೆಂಬರ್ 2018, 6:12 IST
   

ವಾಷಿಂಗ್ಟನ್‌: ವಾಣಿಜ್ಯ ನಗರಿ ಮುಂಬೈ (26/11) ದಾಳಿ ಪ್ರಕರಣದಲ್ಲಿ ಭಾಗಿಯಾರುವ ಪ್ರಮುಖ ರೂವಾರಿ ಅಥವಾ ಸಂಚುಕೋರಯಾವುದೇ ದೇಶದಲ್ಲಿದ್ದರೂ ಅವನ ಬಗ್ಗೆ ಸುಳಿವು ನೀಡಿದವರಿಗೆ 35 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಅಮೆರಿಕ ಘೋಷಣೆ ಮಾಡಿದೆ.

ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ದಾಳಿ ಇದಾಗಿದ್ದು, ದಶಕ ಕಳೆದರೂ ಪ್ರಮುಖ ಆರೋಪಿಗಳು ಮತ್ತು ಸಂಚುಕೋರರಿಗೆ ಶಿಕ್ಷೆಯಾಗಿಲ್ಲ. ಈ ದಾಳಿಯಲ್ಲಿ 166 ಜನರು ಮೃತಪಟ್ಟಿದ್ದರು. ಇವರಲ್ಲಿ 6 ಜನ ಅಮೆರಿಕ ಪ್ರಜೆಗಳು ಸೇರಿದ್ದರು.

ಕೆಲವು ದಿನಗಳ ಹಿಂದಷ್ಟೆ ಸಿಂಗಪೂರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತುಮೈಕ್‌ ಪೆನ್ಸ್‌ ಮುಂಬೈ ದಾಳಿ ಕುರಿತಂತೆ ಚರ್ಚೆ ನಡೆಸಿದ್ದರು. ಈ ವೇಳೆದಾಳಿಯ ರೂವಾರಿ ಮತ್ತು ಸಂಚುಕೋರರ ವಿರುದ್ಧ ಅಗತ್ಯ ಕ್ರಮಕೈಗೊಳ್ಳುವಂತೆ ಅಮೆರಿಕದ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಪಾಕಿಸ್ತಾನಕ್ಕೆ ತಾಕಿತ್ತು ಮಾಡಿದ್ದರು.

ADVERTISEMENT

ದಾಳಿಯ ಪ್ರಮುಖ ಸಂಚುಕೋರ ಎನ್ನಲಾದ, ನಿಷೇಧಿತ ಜಮಾತ್‌–ಉದ್‌– ದವಾ (ಜೆಯುಡಿ) ಮುಖ್ಯಸ್ಥ ಹಫೀಜ್‌ ಸಯೀದ್‌ ಪಾಕಿಸ್ತಾನದಲ್ಲಿ ಈಗ ಮುಕ್ತವಾಗಿ ಸಂಚರಿಸುತ್ತಿದ್ದಾನೆ. ಜತೆಗೆ, ಈ ದಾಳಿಗೆ ಸಂಬಂಧಪಟ್ಟ ಪಾಕಿಸ್ತಾನದ ಶಂಕಿತ ಏಳು ಮಂದಿಗೂ ಇನ್ನೂ ಯಾವುದೇ ರೀತಿಯ ಶಿಕ್ಷೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.