ADVERTISEMENT

ಬ್ಯಾಂಕಿಗೆ ವಂಚನೆ ಮೂವರ ಬಂಧನ

ಪಿಟಿಐ
Published 28 ಅಕ್ಟೋಬರ್ 2023, 19:12 IST
Last Updated 28 ಅಕ್ಟೋಬರ್ 2023, 19:12 IST
<div class="paragraphs"><p>ಬಂಧನ (ಪ್ರಾತಿನಿಧಿಕ ಚಿತ್ರ)</p></div>

ಬಂಧನ (ಪ್ರಾತಿನಿಧಿಕ ಚಿತ್ರ)

   

ನವದೆಹಲಿ/ಚಂಡೀಗಢ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಚಂಡೀಗಢ ಮೂಲದ ಫಾರ್ಮಾ ಕಂಪನಿ ಪ್ಯಾರಾಬೋಲಿಕ್‌ ಡ್ರಗ್ಸ್‌ನ ಇಬ್ಬರು ಪ್ರವರ್ತಕರು ಮತ್ತು ಆ ಕಂಪನಿಯ ಲೆಕ್ಕ ಪರಿಶೋಧಕನನ್ನು (ಸಿಎ) ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ.

ಬ್ಯಾಂಕ್‌ ವಂಚನೆ ಪ್ರಕರಣದ ತನಿಖೆಗೆ ಸಂಬಂಧಿಸಿ, ಪ್ಯಾರಾಬೋಲಿಕ್ ಡ್ರಗ್ಸ್ ಪ್ರವರ್ತಕರಾದ ವಿನೀತ್ ಗುಪ್ತಾ ಮತ್ತು ಪ್ರಣವ್ ಗುಪ್ತಾ ಹಾಗೂ ಸಿಎ ಎಸ್‌.ಕೆ. ಬನ್ಸಾಲ್‌ ಅವರನ್ನು ಸುದೀರ್ಘ ವಿಚಾರಣೆಯ ನಂತರ, ಪಂಚಕುಲದ ವಿಶೇಷ ಪಿಎಂಎಲ್‌ಎ ಕೋರ್ಟ್‌ ಆದೇಶದಂತೆ ಇ.ಡಿ ಶನಿವಾರ ತನ್ನ ವಶಕ್ಕೆ ತೆಗೆದುಕೊಂಡಿದೆ.

ADVERTISEMENT

ದೆಹಲಿಯ ಅಶೋಕ ವಿಶ್ವವಿದ್ಯಾನಿಲಯದ ಕಾರ್ಪೊರೇಟ್ ಆಫೀಸ್‌ ಮತ್ತು ನೋಂದಾಯಿತ ಕಚೇರಿಗಳು ಮತ್ತು ಹರಿಯಾಣದ ಸೋನೆಪತ್‌ನಲ್ಲಿರುವ ಕ್ಯಾಂಪಸ್ ಸೇರಿದಂತೆ ವಿವಿಧೆಡೆ ಇ.ಡಿ ಎರಡನೇ ದಿನವೂ ತನ್ನ ಶೋಧ ಮುಂದುವರೆಸಿತು. ವಿನೀತ್ ಗುಪ್ತಾ ಮತ್ತು ಪ್ರಣವ್ ಗುಪ್ತಾ ಅವರು ಅಶೋಕ ವಿಶ್ವವಿದ್ಯಾನಿಲಯದ ಸಹ ಸಂಸ್ಥಾಪಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.