ADVERTISEMENT

ಉತ್ತರ ಪ್ರದೇಶ: ಗಂಗಾನದಿಯಲ್ಲಿ ಮತ್ತೆ ತೇಲಿದ ಮೂರು ಶವಗಳು

ಪಿಟಿಐ
Published 13 ಜೂನ್ 2021, 9:16 IST
Last Updated 13 ಜೂನ್ 2021, 9:16 IST
ಪ್ರಯಾಗ್‌ ರಾಜ್‌ನಲ್ಲಿ ಗಂಗಾ ನದಿಯಲ್ಲಿ ತೇಲುತ್ತಿದ್ದ ಶವಗಳನ್ನು ಮೇಲೆತ್ತುತತ್ತಿರುವ ಜನ (ಪಿಟಿಐ)
ಪ್ರಯಾಗ್‌ ರಾಜ್‌ನಲ್ಲಿ ಗಂಗಾ ನದಿಯಲ್ಲಿ ತೇಲುತ್ತಿದ್ದ ಶವಗಳನ್ನು ಮೇಲೆತ್ತುತತ್ತಿರುವ ಜನ (ಪಿಟಿಐ)   

ಕನೌಜ್‌(ಉತ್ತರ ಪ್ರದೇಶ): ‘ಕನೌಜ್‌–ಹರ್ದೊಯಿ ಗಡಿ ಬಳಿ ಗಂಗಾ ನದಿಯಲ್ಲಿ ಮಹಿಳೆ ಸೇರಿದಂತೆ ಮೂವರ ಶವಗಳು ಪತ್ತೆಯಾಗಿವೆ’ ಎಂದು ಪೊಲೀಸರು ಭಾನುವಾರ ತಿಳಿಸಿದರು.

‘ಬದ್ನಾಪುರ ಘಾಟ್ ಬಳಿ ನದಿಯಲ್ಲಿ ಶವಗಳು ತೇಲುತ್ತಿರುವುದು ಶನಿವಾರ ಕಂಡುಬಂದಿದೆ. ಸದ್ಯ ಈ ಮೃತದೇಹಗಳನ್ನು ಹರ್ದೊಯಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ’ ಎಂದು ಕನೌಜ್‌ ಪೊಲೀಸ್‌ ವರಿಷ್ಠಾಧಿಕಾರಿ ಪ್ರಶಾಂತ್‌ ವರ್ಮಾ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT