ADVERTISEMENT

ಮಣಿಪುರ: ಬಂಡುಕೋರರ ತಂಡದ ಮೂವರು ಸದಸ್ಯರ ಬಂಧನ

ಪಿಟಿಐ
Published 12 ಡಿಸೆಂಬರ್ 2024, 12:33 IST
Last Updated 12 ಡಿಸೆಂಬರ್ 2024, 12:33 IST
<div class="paragraphs"><p>ಬಂಧನ</p></div>

ಬಂಧನ

   

ಇಂಫಾಲ್‌: ಮಣಿಪುರದ ತೌಬಲ್ ಜಿಲ್ಲೆಯಲ್ಲಿ ನಿಷೇಧಿತ ಬಂಡುಕೋರರ ಸಂಘಟನೆ ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಂಗ್ಲೀಪಾಕ್‌ (ಪ್ರೆಪಕ್-ಪ್ರೊ)ನ ಮೂವರು ಸದಸ್ಯರನ್ನು ಬಂಧಿಸಲಾಗಿದೆ.

ಬಂಧಿತರು ನಿಷೇಧಿತ ಸಂಘಟನೆಯ ಸದಸ್ಯರಾಗಿದ್ದು, ಸುಲಿಗೆಯಲ್ಲಿ ತೊಡಗಿದ್ದರು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ADVERTISEMENT

‘ನಮಗೆ ಸಿಕ್ಕ ಮಾಹಿತಿಯ ಅನುಸಾರ ತೌಬಲ್‌ನ ಕಮಾಂಡೊ ಘಟಕ ಮತ್ತು 4 ಎ.ಆರ್‌ (ಅಸ್ಸಾಂ ರೈಫಲ್ಸ್) ನೇತೃತ್ವದ ಒಸಿ -ಸಿಡಿಒ ತಂಡಗಳು ತೌಬಲ್ ಜಿಲ್ಲೆಯ ಹಿರಿಯ ಪೊಲೀಸ್‌ ಅಧೀಕ್ಷಕರ ನೇತೃತ್ವದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಬಳಿ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಆರೋಪಿಗಳನ್ನು ಬಂಧಿಸಿದವು’ ಎಂದು ಪ್ರಕಟಣೆ ತಿಳಿಸಿದೆ.

ಬಂಧಿತರನ್ನು ನಂಬ್ರಮ್‌ ಇಂದ್ರಜಿತ್‌ ಸಿಂಗ್‌, ರಾಜ್‌ಕುಮಾರ್‌ ಮೋಹನ್‌ ಸನಾ ಮತ್ತು ವಾರೆಪಮ್ ಆಲ್ಬರ್ಟ್ ಮೈತೇಯಿ ಥೋಯಿ ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಇವರು ಸುಲಿಗೆಯಲ್ಲಿ ತೊಡಗಿದ್ದನ್ನು ಒಪ್ಪಿಕೊಂಡಿದ್ದಾರೆ.

ಪ್ರತ್ಯೇಕ ಶೋಧ ಕಾರ್ಯಾಚರಣೆಯಲ್ಲಿ  ಭದ್ರತಾ ಪಡೆಗಳು ಚುರಾಚಂದ್‌ಪುರ ಮತ್ತು ಚಂದೇಲ್ ಜಿಲ್ಲೆಗಳಲ್ಲಿ 10 ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಮತ್ತೊಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.